ಗುರುಪುರ : ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅ. 30 ಮಂಗಳವಾರ ಸಂಜೆ ಕದ್ರಿ ಶ್ರೀಕೃಷ್ಣ ಯಕ್ಷಸಭಾದ 17ನೇ ವರ್ಷದ `ಯಕ್ಷಗಾನ ಸಪ್ತಾಹ’ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ ನರಸಿಂಹ ತಂತ್ರಿ ಮಾತನಾಡಿ, ಯಕ್ಷಗಾನ ಒಂದು ದೈವಿಕ ಕಲೆ. ಅದು ಸಂಸ್ಕøತಿಯ ಕಲೆ. ಶ್ರೀಕೃಷ್ಣ ಯಕ್ಷಸಭಾವು ಕಳೆದ 16 ವರ್ಷಗಳಿಂದ ಯಕ್ಷಗಾನ ಸಪ್ತಾಹದ ಮೂಲಕ ಕಲಾಮಾತೆಯ ಆರಾಧಿಸುತ್ತ, ತನ್ಮೂಲಕ ಜನರಿಗೆ ಮೌಲ್ಯಾಧರಿತ ವಿಚಾರಧಾರೆ ಎರೆಯುತ್ತ ಬಂದಿದೆ” ಎಂದು ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಯಕ್ಷಸಭಾದ ಅಧ್ಯಕ್ಷ ಕೆ ಎಸ್ ಕಲ್ಲೂರಾಯ ಹಾಗೂ ವಾಮಂಜೂರು ಸಂಕೇಶ ಅನಂತ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.
ಬಡಗುಬೆಟ್ಟಿನ ಆರು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಹಾಗೂ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಬರೆ ಕೇಶವ ಭಟ್ ಅವರನ್ನು ಸಭಾದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲ್ಲಿ ಪಿ. ಕಿಶನ್ ಹೆಗ್ಡೆ, ಕೆ. ಮನೋಹರ ಭಟ್, ಪಿ. ರಮಾನಾಥ ಹೆಗ್ಡೆ, ಉದಯಕುಮಾರ್ ಕುಡುಪು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಣ್ಣಗುಡ್ಡೆ ವಾಸುದೇವ ರಾವ್, ಪ್ರದೀಪ್ ಕುಮಾರ್ ಕಲ್ಕೂರ, ಜನಾರ್ದನ ಹಂದೆ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಪ್ರಭಾಕರ ಪೇಜಾವರ, ಸನತ್ ಕುಮಾರ್ ಜೈನ್, ರವಿ ಅಲೆವೂರಾಯ, ರಮಾಮಣಿ, ಸಾವಿತ್ರಿ ಮುಳಿಯ ಉಪಸ್ಥಿತರಿದ್ದರು.
ಕಾರ್ಯಕ್ರಮ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ನಿರೂಪಿಸಿದರು. ಸಹ-ಕೋಶಾಧಿಕಾರಿ ವಾಸುದೇವ ರಾವ್ ಕುಡುಪು ವಂದಿಸಿದರು.
ಬಳಿಕ `ವಿರೋಚಿತ ಕಾಳಗ’ ಯಕ್ಷ ಪ್ರಸಂಗ ಪ್ರದರ್ಶನಗೊಂಡಿತು.


