ಎಡಪದವು: ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ಅರ್ಧದಲ್ಲೇ ಸ್ಥಗಿತಗೊಂಡ ಘಟನೆ ಕುಪ್ಪೆಪದವಿನಲ್ಲಿ ನಡೆದಿದೆ. ಕುಪ್ಪೆಪದವಿನ ಮರೈನ್ ಕಾಲೇಜ್ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಕಾಲೇಜ್ ಆವರಣದಿಂದ ಕುಪ್ಪೆಪದವು ಚರ್ಚ್ ಕ್ರಾಸ್‍ವರೆಗೆ ರಾಜ್ಯೋತ್ಸವ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಅಲಂಕೃತ ವಾಹನದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರ ಇರಿಸಿ ಮೆರವಣಿಗೆ ಹೊರಟಿತ್ತು.
ಅದರೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಎಬಿವಿಪಿ ಜಯಗಳಿಸಿದ್ದು, ಕಾಲೇಜ್ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಎಬಿವಿಪಿ ನಾಯಕನನ್ನು ತೆರೆದ ಜೀಪಿನಲ್ಲಿ ಎಬಿವಿಪಿ ಧ್ವಜಗಳನ್ನು ಅಳವಡಿಸಿ ರಾಜ್ಯೋತ್ಸವ ಮೆರವಣಿಗೆಯ ಜೊತೆಯಲ್ಲಿ ಕರೆತರಲಾಗಿತ್ತು. ಅಲ್ಲದೆ ಧ್ವನಿವರ್ಧಕದಲ್ಲಿ ಎಬಿವಿಪಿ ಹಾಡೊಂದನ್ನು ಅಳವಡಿಸಿ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು.
ಆದರೆ ಮೆರವಣಿಗೆ ಚರ್ಚ್ ಕ್ರಾಸ್‍ನಿಂದ ವಾಪಸ್ ಬರುತ್ತಿದ್ದಾಗ ಪಂಚಾಯತ್ ಮುಂಭಾಗದಲ್ಲಿ ಸ್ಥಳೀಯ ಯುವಕರ ತಂಡವೊಂದು ಮೆರವಣಿಗೆಯನ್ನು ತಡೆದು, ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಎಬಿವಿಪಿ ಧ್ವಜ ಹಾಗೂ ಹಾಡನ್ನು ಬಳಸಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

marain
ಈ ವೇಳೆ ವಿದ್ಯಾರ್ಥಿಗಳು ಸ್ಥಳೀಯ ಯುವಕರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆಯಿತು. ಎಬಿವಿಪಿ ಧ್ವಜವನ್ನು ತೆರವುಗೊಳಿಸುವಂತೆ ತಂಡ ಒತ್ತಾಯಿಸಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಕಾಲೇಜ್ ಮುಖ್ಯಸ್ಥರು ಎಲ್ಲರನ್ನು ಸಮಧಾನಪಡಿಸಿ ಮೆರವಣಿಗೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರಿಂದ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಯಿತು.
ಸಾವಿರಾರು ರೂ. ಖರ್ಚು ಮಾಡಿ ನಾಸಿಕ್ ಬ್ಯಾಂಡ್ ಸಹಿತ ಆಕರ್ಷಕವಾಗಿ ನಡೆಯುತ್ತಿದ್ದ ಮೆರವಣಿಗೆಯನ್ನು ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದಲೇ ಸ್ಥಗಿತಗೊಳಿಸಿದ್ದಾರೆ..

 

By suddi9

Leave a Reply

Your email address will not be published. Required fields are marked *