ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಹಿಂದಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅಧಿಕಾರಿ ರಮಾನಂದ ರಾವ್ ಮಾತನಾಡಿದರು. ಶಾಖಾಧಿಕಾರಿ ಪ್ರೇಮನಾಥ ರಾವ್, ಸಹಾಯಕ ಅಧಿಕಾರಿ ಶಶಿ ಕುಮಾರ್, ಶಿಕ್ಷಕಿ ಹರ್ಷಿತಾ, ಪ್ರಮುಖರಾದ ನಾರಾಯಣ ನಾಯ್ಕ್, ಮೋಹನ ಪೂಜಾರಿ, ನಯನಾ ಆರ್.ಶೆಟ್ಟಿ, ಗೀತಾ ಜಿ.ಎಸ್., ವಿದ್ಯಾ ಪೈ ಮತ್ತಿತರರು ಇದ್ದರು.
