ಫರಂಗಿಪೇಟೆ : ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ 2017-18 ರ ಸಾಲಿನ ವಾರ್ಷಿಕ ಮಹಾಸಭೆಯು ರಂದು ಸೇವಾಂಜಲಿ ಸಭಾ ಗೃಹದಲ್ಲಿ ಆ.21 ಮಂಗಳವಾರದಂದು ಜರಗಿತು.

farangipete- sabhe
ಸಂಘದ ಅಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ವರದಿ ಸಾಲಿನಲ್ಲಿ ನಮ್ಮ ಸಂಸ್ಥೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿರುವುದನ್ನು ತಿಳಿಸಲು ನಾನು ಅತೀವ ಸಂತೋಷ ಪಡುತ್ತೇನೆ ಎಂದು ಹೇಳಿ, ಕಳೆದ ವರ್ಷಾಂತ್ಯಕ್ಕೆ 10.92 ಕೋಟಿ ಇದ್ದ ಠೇವಣಿ ಈ ವರ್ಷಾಂತ್ಯಕ್ಕೆ ರೂ. 11.59 ಕೋಟಿ, ಸಾಲ ಹೊರಬಾಕಿ ರೂ. 7.96 ಕೋಟಿಯಿಂದ 8.35 ಕೋಟಿ, ಹೂಡಿಕೆಗಳು ರೂ. 3.96 ಕೋಟಿಯಿಂದ 4.00 ಕೋಟಿ, ದುಡಿಯುವ ಬಂಡವಾಳ ರೂ 13.35 ಕೋಟಿಯಿಂದ 13.54 ಕೋಟಿ ಸಂಘದ ಒಟ್ಟು ವ್ಯವಹಾರ 50.34 ಕೋಟಿಯಿಂದ 56.08 ಕೋಟಿ ನಿವ್ವಳ ಲಾಭ ರೂ. 6.34 ಲಕ್ಷದಿಂದ 11.65 ಲಕ್ಷ ಆಗಿದ್ದು, ಆಡಿಟ್ ವರ್ಗೀಕರಣದಲ್ಲಿ ” ಎ” ತರಗತಿಯ ಸ್ಥಾನಮಾನ ಪಡೆದಿರುತ್ತದೆ. ಈ ಎಲ್ಲಾ ಸಾಧನೆಯಲ್ಲಿ ಸಹಕರಿಸಿದ ಮಾನ್ಯ ಸದಸ್ಯರು, ಗ್ರಾಹಕರು, ಠೇವಣಿದಾರರು, ಕ್ರಿಯಾಶೀಲ ಸಿಬ್ಬಂದಿವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಸಂಘದ ಹಿರಿಯ ಸದಸ್ಯರುಗಳಾದ ವಿಜಯ ಭಟ್, ಬಿ. ಸಂಕಪ್ಪ, ಉರ್ಬನ್ ಲೋಬೋ, ಶ್ರೀಧರ್ ಶೆಟ್ಟಿ, ಜೋಕೀಮ್ ಲೋಬೋರವರು ದೀಪ ಬೆಳಗಿಸುವ ಮೂಲಕ ಮಹಾಸಭೆಗೆ ಚಾಲನೆ ನೀಡಿದರು.
ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶೃಧ್ಧಾಂಜಲಿ ಸಲ್ಲಿಸಲಾಯಿತು. ಹಾಗೂ ನೆರೆ ಸಂತ್ರಸ್ತ ಕೊಡಗು ಮತ್ತು ಕೇರಳ ರಾಜ್ಯಕ್ಕೆ ನಿಧಿ ಸಂಗ್ರಹವನ್ನು ಮಾಡಲಾಯಿತು. ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಲ. ಬಿ ಯವರು 2017-18 ರ ಸಾಲಿನ ವಾರ್ಷಿಕ ವರದಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ, ನಿರ್ದೇಶಕರುಗಳಾದ ಪಿ. ಸುಬ್ರಹ್ಮಣ್ಯ ರಾವ್, ತೋಮಸ್ ಡಿಸೋಜ, ನಾಗಪ್ಪ ಶೆಟ್ಟಿ, ಸಂತೋಷ್ ಕುಮಾರ್, ಸೋಮನಾಥ, ಶೈಲಜಾ ಪಿ. ಶೆಟ್ಟಿ, ಪ್ರತಾಪ್ ಆಳ್ವ, ವಸಂತಿ.ಕೆ, ಹೆಚ್. ಕೇಶವ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *