ಕೈಕಂಬ : ಕೈಕಂಬದಲ್ಲಿರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ(ಜುಲೈ1) ಆಯೋಜಿಸಲಾದ ಸಮಾರಂಭದಲ್ಲಿ ಸಮಿತಿ ವತಿಯಿಂದ ದಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಯು ಪಿ ಇಬ್ರಾಹಿಂ ಹಾಗೂ ತಾಲೂಕು ಪಂಚಾಯತಿಗೆ ನಾಮ ನಿರ್ದೇಶನಗೊಂಡ ಸದಸ್ಯೆ, ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಸುವರ್ಣರಿಗೆ ಹೂಗುಚ್ಚ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಯುವ ನಾಯಕರಾದ ಯು ಪಿ ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು. ಕೆಪಿಸಿಸಿ ಸದಸ್ಯ ಪೃಥ್ವೀರಾಜ್ ಮಾತಾಡುತ್ತ, ಪಕ್ಷದ ಯುವ ನಾಯಕರಾದ ಯುಪಿ ಅತ್ಯಂತ ಪ್ರಾಮಾಣಿಕ ಹಾಗೂ ಎಲ್ಲರನ್ನೂ ನಗುಮುಖದಿಂದ ಮಾತನಾಡಿಸುವ, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಎಂದರು.
ಸಭೆಯಲ್ಲಿ ತಾಪಂ ಸದಸ್ಯ ಸುನಿಲ್ ಪೂಜಾರಿ, ಸೆಲಿನಾ ಫೆರ್ನಾಂಡಿಸ್, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಉದಯ ಭಟ್, ಕಾಂಗ್ರೆಸ್ ಪದಾಧಿಕಾರಿಗಳಾದ ಅಝೀಝ್ ಬಾಷಾ, ಕೆಡಿಬಿ ಸದಸ್ಯ ಮೊಹಮ್ಮದ್ ಉಂಞ, ಪುರುಷೋತ್ತಮ ಮಲ್ಲಿ, ಸದಾಶಿವ ಶೆಟ್ಟಿ, ಬೂಬಪೂಜಾರಿ, ಯಶವಂತ ಶೆಟ್ಟಿ ಮೊದಲಾದವರಿದ್ದರು. ಮೆಲ್ವಿನ್ ಡಿ’ಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಾಕ್ಸ್ :-
ಶ್ರದ್ಧಾಂಜಲಿ ಸಭೆ
ಸಭೆಯ ಆರಂಭದಲ್ಲಿ, ಇತ್ತೀಚೆಗೆ ನಿಧನ ಹೊಂದಿದ ಕಾಂಗ್ರೆಸ್ ಧುರೀಣ, ಮಾಜಿ ಶಿಕ್ಷಣ ಸಚಿವ ಬಿ ಎ ಮೊಯಿದಿನ್ ಬಾವಚಿತ್ರಕ್ಕೆ ಹೂಹಾರ ಹಾಕಿ ಬ್ಲಾಕ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ ಕೆಪಿಸಿಸಿ ಸದಸ್ಯ ಪೃಥ್ವೀರಾಜ್, ಯು ಪಿ ಇಬ್ರಾಹಿಂ, ವಿಜಯಾ ಸುವರ್ಣರು ಮೊಯಿದಿನರ ಗುಣಗಾನ ಮಾಡಿದರು.
