ಹೂಸ್ಟನ್(ಅಮೇರಿಕಾ): ವಿಚಿತ್ರ ಬೆಳವಣಿಗೆಯೊಂದರಲ್ಲಿ ಗುಡುಗು ಸಿಡಿಲುಗಳ ಮಧ್ಯೆ ಹಾರುವ ತಟ್ಟೆ(ಫ್ಲೈಯಿಂಗ್ ಸಾಸರ್) ಗೋಚರಿಸಿದ ಅಚ್ಚರಿಯ ಘಟನೆಯೊಂದ ಅಮೇರಿಕಾದ ಹೂಸ್ಟನ್ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

fs
ಆ.11ರ ರಾತ್ರಿ ವ್ಯಕ್ತಿಯೋರ್ವ ಕಾರಿನಲ್ಲಿ ಹೋಗುತ್ತಿದ್ದ. ಈತ ಮಿಂಚಿನ ದೃಶ್ಯವನ್ ನಉ ಸೆರೆ ಹಿಡಿಯಬೇಕೆಂದು ಕೆಮಾರವನ್ನು ಆಕಾಶದತ್ತ ಹಿಡಿದಾಗ ಬೆಳಕಿನ ಗುಂಪೊಂದು ಪತ್ತೆಯಾಗಿದೆ. ಇದನ್ನು ಅನ್ಯಗ್ರಹವಾಸಿಗಳ ಹಾರುವ ತಟ್ಟೆ ಇರುಬಹುದೆಂದು ಶಂಕಿಸಲಾಗಿದೆ.
ಕೆಲವರು ಈ ದೃಶ್ಯವನ್ನು ಕಾರಿನ ಹೆಡ್ಲೈಟ್ ಕನ್ನಡಿ ಮುಖಾಂತರ ಸೋಕಿಕೊಂಡು ಕೆಮರಾದಲ್ಲಿ ಸೆರೆಯಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಮೇರಿಕಾದ ಇತರ ಭಾಗಗಳಲ್ಲಿಯೂ ಇಂಥದ್ದೇ ಬೆಳಕಿನ ಸಮೂಹವನ್ನು ಕಂಡಿದ್ದಾಗಿ ಜನರಾಡಿಕೊಳ್ಳುತ್ತಿದ್ದು, ತಾವಿದನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಈ ಘಟನೆ ನಿಜವೇ ಆಗಿದ್ದರೆ ಹಾರುವ ತಟ್ಟೆಗಳ ಇರುವಿಕೆಯ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಿಕ್ಕಂತಾಗುತ್ತದೆ.

By suddi9

Leave a Reply

Your email address will not be published. Required fields are marked *