ಕಿನ್ನಿಗೋಳಿ: ಶ್ರೀ ವಿನಾಯಕ ಮಿತ್ರ ಮಂಡಳಿ ( ರಿ ) ಪಕ್ಷಕೆರೆ ಹಾಗೂ ನೆಹರು ಯವ ಕೇಂದ್ರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಲೋಕಮುಖಿ ಟ್ರಸ್ಟ್ ಮೂಲಕ ಎಸ್. ಕೊಡಿಯಲ್ಲಿ ಖರೀದಿಸಿದ ಜಾಗದಲ್ಲಿರುವ ಹಳೆಯ ಮನೆಯ ಸಾಮಗ್ರಿಗಳನ್ನು ( ಹಂಚು, ರೀಪು, ಪಕ್ಕಾಸ್) ಅರ್ಥಿಕ ಸಂಕಷ್ಟದಲ್ಲಿರುವ ವಾರಿಜ ಅವರಿಗೆ ಮನೆ ಕಟ್ಟಲು ಹಸ್ತಾಂತರಿಸಲಾಯಿತು.
ಲೋಕಮುಖಿ ಟ್ರಸ್ಟ್ ಟ್ರಸ್ಟ್ ಅಧ್ಯಕ್ಷ ಸೊಂದಾಭಾಸ್ಕರ ಭಟ್, ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ ವ ಉಮೇಶ್ ಶೆಟ್ಟಿಗಾರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
