ಕೈಕಂಬ: ಗುರುಪುರದ ಗೋಳಿದಡಿಗುತ್ತಿನಲ್ಲಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಮುಂದಾಳತ್ವದಲ್ಲಿ ‘ರಕ್ಷಾ ಬಂಧನ’ ಕಾರ್ಯಕ್ರಮ ನಡೆಯಿತು.

ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ‘ರಕ್ಷಾ ಬಂಧನದ ಪರಿಕಲ್ಪನೆ ಶತಮಾನಗಳಷ್ಟು ಹಿಂದೆ ಹೋಗುತ್ತದೆ. ಹಿಂದೆ ರಕ್ಷಾ ಧಾರವಾಗಿ ಗಿಡದ(ದಡ್ಡಲ್) ನಾರು ಬಳಕೆ ಮಾಡಲಾಗುತ್ತಿದ್ದರೆ, ನಾರಿಗೆ ಹೂವು ಕಟ್ಟಲಾಗುತ್ತಿತ್ತು. ಇದು ಪರಸ್ಪರ ಒಗ್ಗಟ್ಟು ಮತ್ತು ಪ್ರೀತಿಯ ಸಂಕೇತದ ಆಚರಣೆಯಾಗಿದೆ. ಈಗ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿದ್ದರೂ, ಮೂಲದ ಪ್ರಜ್ಞೆ ಕಳೆದುಕೊಂಡಿಲ್ಲ ಎಂದರು.

ಗುತ್ತಿನ ವೈದ್ಯನಾಥ ದೈವದ ಚಾವಡಿಯಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಗುತ್ತಿನ ಅಭಿಮಾನಿಗಳು ಆತ್ಮೀಯತೆಯಿಂದ ಪರಸ್ಪರ ರಕ್ಷಾ ಬಂಧನ ಕಟ್ಟಿಕೊಂಡರು. ಸುನೀಲಾ ಪಿ. ಶೆಟ್ಟಿ ಅವರು ವಂದಿಸಿದರು.

By Suddi9

Leave a Reply

Your email address will not be published. Required fields are marked *