ಆ.೧೦ರಂದು ಪೊಳಲಿಯಲ್ಲಿ ಮಂಗಳೋತ್ಸವ
ಕೈಕಂಬ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಅಖಂಡ ಭಜನಾ ಸಪ್ತಾಹದ ಮಂಗಳೋತ್ಸವ ಆ.೧೦ರಂದು ಬುಧವಾರ ನಡೆಯಿತು.
ದೇವಳದ ಆಡಳಿತ ಮೊಕ್ತೇಸರರು ಹಾಗೂ ಅನುವಂಶಿಕ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರು ಹಾಗೂ ರಾಜರಾಜೇಶ್ವರಿ ಮಹಿಳಾ ಮಂಡಳಿಯ ಸದಸ್ಯರು, ವಿವಿದ ಸಂಘ ಸಂಸ್ಥೆಯ ಅಧ್ಯಕ್ಷರುಗಳು, ಗ್ರಾಮ ಪಂ. ಅಧ್ಯಕ್ಷರು, ವಿವಿದ ಭಜನಾ ಮಂಡಳಿಯ ಸದಸ್ಯರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.