ಕೋಲಾರ: ಜಿಲ್ಲಾದ್ಯಾಂತ ಒತ್ತುವರಿಯಾಗಿರುವ ಅರಣ್ಯ ಭೂಮಿ ತೆರವುಗೊಳಿಸುವಂತೆ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಂತೆ ಒತ್ತಾಯಿಸಿ ಜೂ 15 ರಂದು ಸೋಮವಾರ ಅರಣ್ಯ ಇಲಾಖೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಜಿಲ್ಲಾದ್ಯಾಂತ ಸರ್ಕಾರಿ ಗೋಮಾಳ ಗುಂಡುತೋಪು, ಕೆರೆ, ಕುಂಟೆ ಸಂಪೂರ್ಣವಾಗಿ ಬಲಾಡ್ಯರು ಹಾಗೂ ರಾಜಕೀಯ ರಿಯಲ್ ಎಸ್ಟೇಟ್ ಉದ್ಯಮಿಗಳು ಒತ್ತುವರಿ ಮಾಡುವ ಜೊತೆಗೆ ನಕಲಿ ದಾಖಲೆಗಳ ಸೃಷ್ಠಿಸಿ, ನುಂಗಿ ನೀರು ಕುಡಿದು ಈಗ ಅವರ ಕಣ್ಣು ಜಿಲ್ಲಾದ್ಯಾಂತ ಅರಣ್ಯ ಭೂಮಿ ಮೇಲೆ ಬಿದ್ದಿದೆ.Raitha sangha forest land muttige news 08-06-2020

ದಿನೇ ದಿನೇ ಎಲ್ಲಾ ತಾಲ್ಲೂಕುಗಳಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಕೆಲವು ಕಂದಾಯ, ಸರ್ವೇ ಹಾಗೂ ನೊಂದಣಿ ಅಧಿಕಾರಿಗಳ ಸಮ್ಮುಖದಲ್ಲಿ ಕೋಟಿ ಕೋಟಿ ಹಣಕ್ಕೆ ಅರಣ್ಯ ಭೂಮಿಗೆ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕುಗಳಲ್ಲಿ ನೂರಾರು ಕೋಟಿ ಸಾಲ ಪಡೆದಿರುತ್ತಾರೆ. ಆದರೆ ಬಡವರು ಒಂದು ಅಡಿ ಭೂಮಿಗೆ ಬಂದರೆ ಕಾನೂನು ಕ್ರಮ ಆದರೆ ಸಾವಿರಾರು ಎಕರೆ ಒತ್ತುವರಿ ಮಾಡಿರುವಂತಹ ವಿರುದ್ದ ಕ್ರಮ ಯಾಕೆ ಇಲ್ಲವೆಂದು ಅರಣ್ಯಾಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಇದರ ಮದ್ಯೆ ಕೋರೋನಾ ಹಾವಳಿ ನಡುವೆ ಬೆಳೆದಿರುವ ರೈತರ ಬೆಳೆ ಸಮೃದ್ದವಾಗಿ ಬಂದಿದ್ದರು ರಾತ್ರೋರಾತ್ರಿ ಕಾಡು ಪ್ರಾಣಿಗಳ ಹಾವಳಿತಪ್ಪಿದ್ದಲ್ಲಾ ಸುಮಾರು ವರ್ಷಗಳಿಂದ ಕಾಡು ಪ್ರಾಣಿಗಳ ಹಾವಳಿಗೆ ರೈತರು ಕೋಟ್ಯಾಂತರ ಬೆಳೆ ನಾಶವಗುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ವಿಪಲವಾಗಿರುವುದನ್ನು ಖಂಡಿಸಿ ದಿನಾಂಕ 15-06-2020ರ ಸೋಮವಾರ ಬೆಳೆ ನಾಶವಾಗಿರುವ ಬೆಳೆಗಳ ಸಮೇತ ಅರಣ್ಯ ಇಲಾಖೆ ಮುತ್ತಿಗೆ ಹಾಕಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಪಾರುಕ್‍ಪಾಷ, ಈಕಂಬಳ್ಳಿ ಮಂಜುನಾಥ್,ವಕ್ಕಲೆರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಅಶ್ವತಪ್ಪ, ಜಗದೀಶ್, ಗಣೇಶ್, ವಡ್ಡಹಳ್ಳಿ ಮಂಜುನಾಥ್,ಶಿವು, ನಾರಾಯಣ್, ನವೀನ್, ಆನಂದರೆಡ್ಡಿ ಮುಂತಾದವರಿದ್ದರು.

By Suddi9

Leave a Reply

Your email address will not be published. Required fields are marked *