ಗುರುಪುರ : ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್ ಜಾರಿಯಾದ ಕಾರಣ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಗ್ರಾಮ ಪಂಚಾಯತ್‍ನ ಮೂಳೂರು ಮತ್ತು ಅಡ್ಡೂರು ಪ್ರದೇಶದಲ್ಲಿ ಶಾಸಕ ಡಾ. ಭರತ್ ಶೆಟ್ಟಿಯವರಿಂದ ಗುದ್ದಲಿಪೂಜೆ ನಡೆದ ಬಳಿಕ ಸ್ಥಗಿತಗೊಂಡಿದ್ದ 1.65 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಸೋಮವಾರ ಪುನರಾರಂಭಗೊಂಡಿತು.

gur-june-8-chamani road

ಗುರುಪುರ ಚಾಮಾಣಿಯಲ್ಲಿ ಜಂಗಮ ಮಠ ರಸ್ತೆ ಕಾಂಕ್ರೀಟೀಕರಣ ಆರಂಭಗೊಂಡಿದ್ದು, ಚಾಮಾಣಿ ಹಿಂಬದಿ ರಸ್ತೆ, ಚಿಲಿಂಬಿಗುಡ್ಡೆ, ವನಭೋಜನ, ಗುರುಪುರ ಶಾಲೆ ಬಳಿ, ಅಡ್ಡೂರು ಸಹಿತ ಒಟ್ಟು ಏಳು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ.

By suddi9

Leave a Reply

Your email address will not be published. Required fields are marked *