ವರಕೋಡಿ:ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಗುರುವಾರ ಯಕ್ಷಧಾಮದ ವಠಾರದಲ್ಲಿ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಚಂದ್ರಶೇಖರ ಅಜಿಲ ನೆರವೇರಿಸಿದರು. ಮಧ್ಯಾಹ್ನ “ಆಟಿದ ವನಸ್” ಮತ್ತು “ಕೆಸರ್‍ಡ್ ಒಂಜಿ ದಿನ” ಕೆಸರು ಗದ್ದೆ ಕ್ರೀಡಾ ಕೂಟವು ವರಕೋಡಿ ಬಾಕಿಮಾರ್ ಗದ್ದೆಯಲಿ ಜರಗಿತು.

ಕೆಸರು ಗದ್ದೆ ಕೂಟದಲ್ಲಿ ಯುವಕರಿಗೆ ಯುವತಿಯರಿಗೆ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದಲ್ಲಿ ಉಮೇಶ್ ಸಾಲಿಯಾನ್ ಬೆಂಜನ ಪದವು, ಪುಷ್ಪರಾರ್ಜ ಶೆಟ್ಟಿ ಕಮ್ಮಾಜೆ,ಚಂದ್ರಶೇಖರ ಅಜಿಲ, ಜನಾರ್ಧನ ಎಚ್, ಎಸ್, ಪ್ರಮೋದ್ ಕಮ್ಮಾಜೆ, ಪ್ರಶಾಂತ್ ಕುಲಾಲ್, ದಿನೇಶ್ ವರಕೋಡಿ ಮೊದಲಾದವರಿದ್ದರು.



