ಕೈಕಂಬ: ಮಂಗಳೂರಿನಿಂದ ಮೂಡಬಿದಿರೆಗೆ ಸಾಗುತ್ತಿದ್ದ ಗೊಬ್ಬರ ಸಾಗಾಟದ ಲಾರಿ ಪಲ್ಟಿಯಾಗಿ, ಅದರ ಚಾಲಕ ಗಾಯಗೊಂಡ ಘಟನೆ ಗಂಜಿಮಠ ಸಮೀಪದ ಮುಚ್ಚೂರು ಕ್ರಾಸ್ ಬಳಿ ಶನಿವಾರ ಮಧ್ಯಾಹ್ನದ ವೇಳೆ ಸಂಭವಿಸಿದೆ. 1509malali9
ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿ ಮಗುಚಿಬಿದ್ದಿದ್ದು, ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇದರೊಳಗಡೆ ಚಾಲಕ ಸಿಲುಕಿದ್ದು, ಇವರನ್ನು ಹೊರತೆಗೆಯಲು ಹರಸಾಹಸ ಪಡಲಾಗಿತ್ತು. ಚಾಲಕನಿಗೆ ಸ್ವಲ್ಪಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

By Suddi9

Leave a Reply

Your email address will not be published. Required fields are marked *