gur-june-5-parisara dina-2

ಗುರುಪುರ: ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಕಚೇರಿ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ `ವಿಶ್ವ ಪರಿಸರ ದಿನ‘ ಕಾರ್ಯಕ್ರಮವನ್ನು ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ ಉದ್ಘಾಟಿಸಿದರು.

ಬಳಿಕ ಮಾತನದಡಿದ ಅವರು, ಪರಿಸರ ನಾಶದಿಂದ ಇಂದು ಮನುಕುಲ ತತ್ತರಿಸುವಂತಾಗಿದೆ. ಪರಿಸರ ಉಳಿಸಲು ನಾವೆಲ್ಲರೂ ಪ್ರಯತ್ನಿಸದೆ ಹೋದಲ್ಲಿ ಭವಿಷ್ಯದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುತ್ತಲ ಪ್ರದೇಶದಲ್ಲಿ ಸಸಿ ನೆಟ್ಟು ಪರಿಸರ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಪರಿಸರ ಕೆಟ್ಟರೆ ಮನುಷ್ಯ ಕುಲವೇ ಕಂಗೆಟ್ಟಂತೆ ಎಂದು ಹೇಳಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ರುಕಿಯಾ ಹಾಗೂ ಮಾಜಿ ಅಧ್ಯಕ್ಷೆ ಪದ್ಮಿನಿ ಗ್ರಾಪಂ ವಠಾರದಲ್ಲಿ ಸಸಿ ನೆಟ್ಟರು.

ಕಾರ್ಯಕ್ರಮದಲ್ಲಿ ಸದಸ್ಯರಾದ ಯಶವಂತ ಶೆಟ್ಟಿ, ಮೋಹಿನಿ, ಉಮೈ ಭಾನು, ಗ್ಲಾಡಿಸ್ ಕ್ವಾಡ್ರಸ್, ಸೇಸಮ್ಮ, ಶೋಭಾ, ಅಹ್ಮದ್ ಬಾವ ಹಾಗೂ ಎ ಕೆ ಮುಸ್ತಾಫ, ಲೆಕ್ಕ ಸಹಾಯಕ ಇಸ್ಮಾಯೀಲ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

gur-june-5-parisara dina-1

By Suddi9

Leave a Reply

Your email address will not be published. Required fields are marked *