ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಂಗಳೂರು ಶಾಸಕ ಮಾಜಿ ಗೃಹ ಸಚಿವ ಆರ್. ಅಶೋಕ್ ಬೇಟಿ ನೀಡಿ ಪೂಜೆ ಸಲ್ಲಿಸಿದರು.

13-vm-ashok

ದೇವಸ್ಥಾನದ ವತಿಯಿಂದ ಶಾಸಕರನ್ನು ಮೊಕ್ತೇಸರ ವಾಸುದೇವ ಆಸ್ರಣ್ಣ , ಅರ್ಚಕರಾದ ಅನಂತ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ಕುಮಾರ್ ಆಸ್ರಣ್ಣ ಸ್ವಾಗತಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಾವೇರಿ ಸಮಸ್ಯೆಯ ಬಗ್ಗೆ ಆ.18 ರಂದು ಕರ್ನಾಟಕದ ಬಗ್ಗೆ ತೀರ್ಪೂ ಬರಲಿದೆ, ಆದರೂ ಟ್ರುಬಿನಲ್ ಸಮಿತಿ ರಚನೆಯನ್ನು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮದ್ಯಪ್ರವೇಶಿಸಿ ತಪ್ಪಿಸಿದ್ದಾರೆ.

ಕಾವೇರಿ ವಿಷಯದ ಬಗ್ಗೆ ಅನಂತಕುಮಾರ್ ಹಾಗೂ ಡಿ. ವಿ. ಸದಾನಂದ ಗೌಡ ತುಂಬಾ ಮುತುವರ್ಜಿವಹಿಸಿ ಕೆಲಸವನ್ನು ಮಾಡಿದ್ದಾರೆ ಆದರೂ ಬಿಜೆಪಿ ವಿರುದ್ದ ಆರೋಪಿಸುತ್ತಾರೆ, ತಮಿಳುನಾಡಿಗೆ ಬೇಕಾದಷ್ಟು ನೀರು ಬಿಟ್ಟು ಆಗಿದೆ, ಕಾವೇರಿ ವಿಷಯದಲ್ಲಿ ರಾಜ್ಯದ ಜನತೆಗೆ ಅನ್ಯಾಯ ಆಗಬಾರದು, ರಾಜ್ಯದ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸಿ.ಎಂ ಸಿದ್ದರಾಮಯ್ಯ ಬಗೆಹರಿಸುವ ಬದಲು ನಿದ್ದೆಯಲ್ಲಿದ್ದಾರೆ ಸರಿಯಾದ ರೀತಿಯಲ್ಲಿ ವಾದ ಮಂಡಿಸುತ್ತಿದ್ದರೆ ಇಂತಹ ಸಮಸ್ಯೆ ಆಗುತಿರಲಿಲ್ಲ, ಇದಕ್ಕೆ ರಾಜ್ಯ ಸರಕಾರದ ವೈಪ್ಯಲ್ಯವೇ ಕಾರಣ, ಯಡ್ಯೂರಪನವರು ಹೇಳಿದಂತೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದ್ದು , ಕಾಂಗ್ರೇಸ್ ಗೆ ಇದು ಕೊನೆಯ ಅವಕಾಶವಾಗಿದೆ ಎಂದರು.

ಈ ಸಂದರ್ಭ ಬೆಂಗಳೂರು ದಕ್ಷಿಣ ಕ್ಷೇತ್ರದ ಇ. ಕೃಷ್ಣಪ್ಪ , ಮಾಜಿ ಶಾಸಕ ರಘಪತಿ ಭಟ್, ಮೂಲ್ಕಿ ಮೂಡಬಿದಿರೆ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು, ಯುವಮೂರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ , ಜಿಲ್ಲಾ ಹಿಂದುಳಿದ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಅದಿತ್ಯ ಶೆಟ್ಟಿ ಎಕ್ಕಾರು, ಸತೀಶ್ ಶೆಟ್ಟಿ ಎಕ್ಕಾರು ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *