swine-flu

ಮಂಗಳೂರು: ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಭೀತಿ ಶುರುವಾಗುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಆದರೂ ಅವುಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗುತ್ತಿದೆ.

ಕಳೆದ ವರ್ಷದ ಅಂಕಿ ಅಂಶಗಳನ್ನು ತೆಗೆದು ನೋಡಿದರೆ ಈ ಬಾರಿ ಜನವರಿಯಿಂದ ಎಪ್ರಿಲ್‌ವರೆಗೆ ದಾಖಲಾಗಿರುವ ಮಲೇರಿಯಾ, ಡೆಂಗ್ಯೂ ಮತ್ತು ಇಲಿ ಜ್ವರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿಯಿಂದ ಎಪ್ರಿಲ್‌ವರೆಗೆ ಕೇವಲ 8 ಡೆಂಗ್ಯೂ ಪ್ರಕರಣ ಪತ್ತೆಯಾದರೆ, ಈ ಬಾರಿ ಅದೇ ನಾಲ್ಕು ತಿಂಗಳಲ್ಲಿ ಒಟ್ಟು 40 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2017ರಲ್ಲಿ ಮಂಗಳೂರಿನಲ್ಲಿ ಕೇವಲ 5 ಪ್ರಕರಣ ಕಂಡು ಬಂದರೆ ಈ ಬಾರಿ ಎಪ್ರಿಲ್‌ ವೇಳೆಗೆ 18 ಪ್ರಕರಣ ಪತ್ತೆಯಾಗುವ ಮೂಲಕ ಮೊದಲ ಸ್ಥಾನದಲ್ಲಿದೆ.

ಇನ್ನು ಬಂಟ್ವಾಳದಲ್ಲಿ ಕಳೆದ ವರ್ಷ 2 ಡೆಂಗ್ಯೂ ಪತ್ತೆಯಾದರೆ ಈ ವರ್ಷ 5, ಬೆಳ್ತಂಗಡಿಯಲ್ಲಿ ಕಳೆದ ವರ್ಷ 1, ಈ ವರ್ಷ 6 ಪ್ರಕರಣಗಳು ಪತ್ತೆಯಾಗಿವೆ. ಪುತ್ತೂರು ಮತ್ತು ಸುಳ್ಯದಲ್ಲಿ ಕಳೆದ ವರ್ಷ ಯಾವುದೇ ಡೆಂಗ್ಯೂ ಜ್ವರ ಕಂಡು ಬಂದಿಲ್ಲ. ಆದರೆ ಈ ವರ್ಷ ಕ್ರಮವಾಗಿ 5 ಮತ್ತು 6 ಪ್ರಕರಣಗಳು ನಾಲ್ಕು ತಿಂಗಳಲ್ಲಿ ಪತ್ತೆಯಾಗಿವೆ.

 

By Suddi9

Leave a Reply

Your email address will not be published. Required fields are marked *