ಕಟೀಲು: ಈ ಸಾಲಿನ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲಾ ಆರು ಮೇಳಗಳ ಪ್ರದರ್ಶನಗಳು ಅದ್ದೂರಿಯಾಗಿ ಶುಕ್ರವಾರ ರಾತ್ರಿ ತೆರೆಕಂಡಿದೆ.
ನಿನ್ನೆ ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥಬೀದಿಯಲ್ಲಿ ಒಂದೇ ವೇದಿಕೆಯಲ್ಲಿ ಆರು ರಂಗಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ಸಮಾಪ್ತಿ ಹೊಂದಿದೆ.
ಯಕ್ಷಗಾನ ರಂಗದಲ್ಲಿ ಆರು ಮೇಳಗಳನ್ನು ಹೊಂದಿರುವ ಏಕೈಕ ಮಂಡಳಿಗೆ ಖ್ಯಾತಿ ಹೊಂದಿರುವ ಶ್ರೀ ಕಟೀಲು ದಶಾವತಾರ ಯಕ್ಷಗಾನ ಮಂಡಳಿಯ 2017-18ನೇ ಸಾಲಿನ ತಿರುಗಾಟದ ಪ್ರಥಮ ಪ್ರದರ್ಶನ ಕಳೆದ ವರ್ಷ ನ.13 ರಂದು ರಾತ್ರಿ ಕಟೀಲಿನ ರಥಬೀದಿಯಲ್ಲಿ ನಡೆದಿತ್ತು.

