ದಿಲ್ಲಿ : ಕರ್ನಾಟಕದಲ್ಲಿ ಬಹುಮತ ಇಲ್ಲದ ಬಿಜೆಪಿಯನ್ನು ಸರಕಾರ ರಚಿಸುವಂತೆ ಕೇಳಿರುವ ರಾಜ್ಯಪಾಲರ ನಿರ್ಧಾರವು ಸಾಂವಿಧಾನಿಕ ಅಧಿಕಾರದ ಸಂಪೂರ್ಣ ದುರಪಯೋಗವಾಗಿದೆ ಎಂದಿರುವ ಹಿರಿಯ ನ್ಯಾಯವಾದಿ ಮತ್ತು ಕಾನೂನು ಪರಿಣತ ರಾಮ್ ಜೇಠ್ಮಲಾನಿ ಅವರು ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ವೈಯಕ್ತಿಕ ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಜೇಠ್ಮಲಾನಿ ಅವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ನಾಳೆ ಇದೇ ವಿಷಯಕ್ಕೆ ಸಂಬಂಧಿಸಿ ಮತ್ತೆ ಸೇರಲಿರುವ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ ಎಂದು ತಿಳಿಸಿದೆ.

