elections-1-1-696x413

ಬೆಂಗಳೂರು: ಚುನಾವಣೆ ಎಂದ ಕೂಡಲೇ ನೆನೆಪಿಗೆ ಬರುವುದು ಮತಗಟ್ಟೆಗಳು ಮತ್ತು ಚುನಾವಣಾ ಗುರುತಿನ ಚೀಟಿ. ಮತದಾನ ಮಾಡೋಕೆ ಮತದಾರರ ಗುರುತಿನ ಚೀಟಿಯೇ ಬೇಕು ಎನ್ನುವ ಯೋಚನೆ ಜನರಲ್ಲಿದೆ. ಆದರೆ ಮತದಾನ ಮಾಡಲು ವೋಟರ್ ಐಡಿಯೇ ಬೇಕು ಎಂದೇನಿಲ್ಲ. ಇನ್ನಿತರ ದಾಖಲೆಗಳನ್ನು ಕೂಡ ಬಳಸಿಕೊಂಡು ಮತದಾನ ಮಾಡಬಹುದಾಗಿದೆ.

ಮತದಾನವು ಶೇ.100ರಷ್ಟು ನಡೆಯಬೇಕು, ಜನ ಹೆಚ್ಚು ಹೆಚ್ಚು ಮತಗಟ್ಟೆಗೆ ಬರಬೇಕು ಎನ್ನುವುದು ಚುನಾವಣಾ ಆಯೋಗದ ಆಶಯ. ಹೀಗಾಗಿ ಮತಪಟ್ಟಿಯಲ್ಲಿ ಹೆಸರು ಇರುವವರೆಲ್ಲಾ ಮತ ಚಲಾವಣೆ ನಡೆಸಲು ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾರರ ಚೀಟಿಯಲ್ಲಿ ಹೆಸರಿದ್ದ ಮತದಾರರು ಒಟ್ಟು 12 ಬಗೆಯ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮತದಾನ ಮಾಡಬಹುದು. ಪಾಸ್‍ಪೋರ್ಟ್, ವಾಹನ ಚಾಲನಾ ಪರವಾನಗಿ ಪತ್ರ, ರಾಜ್ಯ ಸರ್ಕಾರ, ಅರೆ ಸರ್ಕಾರಿ, ಪಿಎಸ್‍ಯು, ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ನೀಡಿರುವ ಫೋಟೊ ಗುರುತಿನ ಚೀಟಿ, ಬ್ಯಾಂಕ್‍, ಪೋಸ್ಟ್‌ ಆಫೀಸ್‍ ನೀಡಿರುವ ಫೋಟೊ ಪಾಸ್‍ಬುಕ್‍, ಸ್ಮಾರ್ಟ್‍ಕಾರ್ಡ್, ಎಮಿನಾಲಿಟಿ, ಜಾಬ್‍ಕಾರ್ಡ್‍, ಆರೋಗ್ಯ ವಿಮಾ ಸ್ಮಾರ್ಟ್‍ ಕಾರ್ಡ್‍, ಚುನಾವಣಾ ಆಯೋಗದಿಂದ ನೀಡಿರುವ ಫೋಟೊ ಗುರುತಿನ ಚೀಟಿ, ಪಿಂಚಣಿ ಗುರುತಿನ ಚೀಟಿ, ಸಂಸದರು, ಶಾಸಕರಿಗೆ ನೀಡುವ ಅಧಿಕೃತ ಗುರುತಿನ ಚೀಟಿ, ಆಧಾರ್‍ ಕಾರ್ಡ್‍ ಸೇರಿದಂತೆ 12 ವಿಧದ ಕಾರ್ಡ್‍ ಬಳಸಿ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

By suddi9

Leave a Reply

Your email address will not be published. Required fields are marked *