167786-bhavana

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಎರಡೇ ದಿನಗಳಿರುವಾಗ ಕಾಂಗ್ರೆಸ್ ತೊರೆದಿದ್ದ ನಟಿ ಭಾವನಾ ರಾಮಣ್ಣ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಭಾವನಾ, ಟಿಕೆಟ್‌ ಕೈ ತಪ್ಪಿದ ಕೂಡಲೇ ಪಕ್ಷದಿಂದ ಹೊರ ಬಂದಿದ್ದರು. ನಂತರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಅವರ ಸಮ್ಮುಖದಲ್ಲಿ ಭಾವನಾ ಕೈ ಬಿಟ್ಟು ಕಮಲ ಹಿಡಿದಿದ್ದಾರೆ.

By suddi9

Leave a Reply

Your email address will not be published. Required fields are marked *