ಬಂಟ್ವಾಳ: ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮತ್ತಷ್ಟು ಚುರುಕುಗೊಂಡಿದ್ದು, ಸಿಎಂ ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್ ಮೇಲೆ ದಾಳಿ ನಡೆಸಿದ ಬಳಿಕ ಮಂಗಳವಾರ ಸಂಜೆ ಸಚಿವ ರಮಾನಾಥ್ ರೈ ಅವರ ಆಪ್ತರಾಗಿದ್ದ ಇಬ್ಬರು ಉದ್ಯಮಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದೆ.
ಬಿರ್ವ ಸೆಂಟರ್ ನ ಸಂಜೀವ್ ಪೂಜಾರಿ ಮತ್ತು ಮುಗ್ರೋಡಿ ಕನ್ಸ್ ಟ್ರಕ್ಸನ್ಸ್ ನಸುಧಾಕರ್ ಶೆಟ್ಟಿ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ದಾಖಲೆ ರಹಿತ ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

