ಗುರುಪುರ: 2018ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಗುರುಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾಗೆ ಶೇ. 89.12 ಫಲಿತಾಂಶ ಗಳಿಸಿದೆ.

ಗುರುಪುರದ ಚಾಮಾಣಿಯ ಲೋಕೇಶ್-ವೇದಾವತಿ ದಂಪತಿಯ ಪುತ್ರಿ ಲಿಖಿತಾ 557 ಅಂಕ(ಶೇ 89.12) ಪಡೆದು ಶಾಲೆಗೆ ಪ್ರಥಮ ಬಂದಿದ್ದು, ಉಳಿದಂತೆ ಬಬಿತಾ(535-85.60%), ನಿರೀಶ್ ಕುಮಾರ್ (532-85.12%), ಶ್ರೀರಕ್ಷಾ ಭಟ್ ಜಿ.ಎಂ. (518-82.88%) ಮತ್ತು ಭವ್ಯಾ (514-82.24%) ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಮೂವರು ಡಿಸ್ಟಿಂಗ್ಶನ್, 27 ಮಂದಿ ಪ್ರಥಮ ಶ್ರೇಣಿ, ಮೂವರು ದ್ವಿತೀಯ ಶ್ರೇಣಿ ಮತ್ತು ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ರೂಪಾ ಡಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *