ಕೈಕಂಬ : ಬಂಟ್ಸ್ ಸಮುದಾಯದ ಬಡ ಯುವತಿಯರ ವಿವಾಹಕ್ಕೆ ನೆರವಾಗುವ ಸದುದ್ದೇಶವಿಟ್ಟುಕೊಂಡಿರುವ ಗುರುಪುರ ಬಂಟರ ಮಾತೃ ಸಂಘವು ಜಾಗತಿಕ ಬಂಟರ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘದ ಸಹಕಾರದೊಂದಿಗೆ ಮೇ 7ರಂದು ನಡೆದ ಮಂಗಳೂರು ತಾಲೂಕಿನ ತೆಂಕುಳಿಪಾಡಿ ಗ್ರಾಮದ ಮಳಲಿ ಮೇಗಿನಮನೆ ಪ್ರಸಾದ್ ಶೆಟ್ಟಿಯವರ ಪುತ್ರಿಯ ವಿವಾಹಕ್ಕೆ ಸಹಾಯ ಮಾಡಿತು.
ಬಜ್ಪೆ ಸಂಜೀವ ಶೆಟ್ಟಿ ಸಭಾಗೃಹದಲ್ಲಿ ನಡೆದ ಅರ್ಪಿತಾ ಶೆಟ್ಟಿ ವಿವಾಹಕ್ಕೆ ಜಾಗತಿಕ ಬಂಟರ ಒಕ್ಕೂಟ 20,000 ರೂ, ಬೆಂಗಳೂರು ಬಂಟರ ಸಂಘ ಚಿನ್ನದ ಮಂಗಲಸೂತ್ರ ಹಾಗೂ ಗುರುಪುರ ಬಂಟರ ಮಾತೃ ಸಂಘ 15,000 ರೂ ನೆರವು ನೀಡಿತು. ಈ ಕೆಲಸದ ಹಿಂದೆ ಗುರುಪುರ ಬಂಟರ ಮಾತೃ ಸಂಘದ ಪದಾಧಿಕಾರಿಗಳ ಶ್ರಮವಿದೆ.
ಮಧುಮಗಳ ಕುಟುಂಬಕ್ಕೆ ಸಹಾಯ ನೀಡಲಾದ ಕಾರ್ಯಕ್ರಮ ಇತ್ತೀಚೆಗೆ ಗುರುಪುರ ಬಂಟರ ಮಾತೃ ಸಂಘದ ಕುಕ್ಕದಕಟ್ಟೆ ಕಚೇರಿಯಲ್ಲಿ ಜರುಗಿತು. ಅರ್ಪಿತಾ ಶೆಟ್ಟಿಯ ವಿವಾಹ ದಿನೇಶ್ ರೈಯೊಂದಿಗೆ ನಡೆಯಿತು.
