ವಾಮಂಜೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟು ದಿವ್ಯಾಂಗ ವಿದ್ಯಾರ್ಥಿಗಳನ್ನು ಸಾಮಾನ್ಯ ವಿದ್ಯಾರ್ಥಿಗಳೊಡನೆ ಸೇರಿಸಿ ಸಮನ್ವಯವನ್ನು ಶಿಕ್ಷಣವನ್ನು ಕೊಡುತ್ತಿರುವ ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಗೆ 2017-18 ನೆ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 94.87% ಫಲಿತಾಂಶ ಬಂದಿರುತ್ತದೆ. 39 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 37 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
39 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ದಿವ್ಯಾಂಗ ವಿದ್ಯಾರ್ಥಿಗಳಾಗಿದ್ದು ಎಲ್ಲ 9 ದಿವ್ಯಾಂಗ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರೀತಮ್ ಕುಮಾರ್, ನಿತಿನ್ ಕುಮಾರ್, ಪ್ರಾಶಾಲ್ ಸಂಜೋತ್, ಅನುಷ್ ನಾೈಯ್ಕ್,ಧನುಶ್ ಕುಮಾರ್, ಗಗನ್ ಎಂ ಪ್ರಭು, ರಝ್ವೀನಾ,ಅವಿತ್ ಆರ್, ಚೇತನ್ ಕುಮಾರ್ ಇವರುಗಳು ಉತ್ತೀರ್ಣಗೊಂಡ ದಿವ್ಯಾಂಗ ವಿದ್ಯಾರ್ಥಿಗಳಾಗಿದ್ದಾರೆ.
