nj7471-397a-i1

ಮೂಡುಬಿದಿರೆ: ಯುವತಿಯೊರ್ವಳಿಗೆ ನಡೆದ ಹಲ್ಲೆಯನ್ನು ಪ್ರಶ್ನಿಸಿದಕ್ಕೆ ದಂತ ವೈದ್ಯರೊಬ್ಬರಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಮೂಡುಬಿದಿರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಡಾ.ರೋಶನ್ ಎಂಬವರು ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದ್ದು, ಇವರು ಮೂಡುಬಿದಿರೆ ಪೇಟೆಯಲ್ಲಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ದಂತ ವೈದ್ಯಕೀಯ ಕ್ಲಿನಿಕ್ ಹೊಂದಿದ್ದಾರೆ. ಅದೇ ಸಂಕೀರ್ಣದಲ್ಲಿ ರೋಶನ್ ಅವರ ತಂದೆ ಮಡಿಕಲ್ ಸೆಂಟರ್ ಹೊಂದಿದ್ದು, ಅಲ್ಲಿಗೆ ಯುವತಿಯೋರ್ವಳು ಕೆಲಸಕ್ಕೆ ಬರುತ್ತಿದ್ದಳು. ಈ ವಿಚಾರವಾಗಿ ಯುವತಿಯ ಸಹೋದರಿಯ ಗಂಡ ಶಾಕಿರ್ ಎಂಬಾತ ತಗಾದೆ ತೆಗೆದಿದ್ದು, ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.

ಇದನ್ನು ಪ್ರಶ್ನಿಸಲು ಆರೋಪಿ ಶಾಕಿರ್ ಕ್ಲಿನಿಕ್‌ಗೆ ಬಂದು ಯುವತಿ ಜತೆಗೆ ಉಡಾಫೆಯಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ವೇಳೆ ಅಲ್ಲೇ ಇದ್ದ ದಂತ ವೈದ್ಯ ರೋಶನ್ ಆರೋಪಿ ಶಾಕಿರ್‌ನನ್ನು ಪ್ರಶ್ನಿಸಿದ್ದು, ಕೋಪಗೊಂಡ ಶಾಕಿರ್ ರೋಶನ್ ಹಣೆಗೆ ಕೈಪಂಚ್‌ನ ಮೂಲಕ ಬಲವಾಗಿ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ರೋಶನ್ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *