
ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಈ ಬಾರಿ 82 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಈ ಹಿಂದೆ ಮೊದಲ ಪಟ್ಟಿಯಲ್ಲಿ 72 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಏ. 8 ರಂದು ಪ್ರಕಟಿಸಿತ್ತು.
ಇನ್ನೂ ಬೆಳ್ತಂಗಡಿ ಕ್ಷೇತ್ರ- ಹರೀಶ್ ಪೂಂಜಾ, ಬಂಟ್ವಾಳ – ರಾಜೇಶ್ ನಾಯಕ್, ಪುತ್ತೂರು- ಸಂಜೀವ್ ಮಠಂದೂರು , ಮೂಡುಬಿದಿರೆ – ಉಮನಾಥ್ ಕೋಟ್ಯಾನ್ ಇವರು ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
