
ಕಾಪು : ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ನೇತೃತ್ವದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಯುವ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರ ಪರವಾಗಿ ಮತಯಾಚನೆ ಕಾರ್ಯಕ್ರಮ ಬಿರುಸಿನಿಂದ ನಡೆಯಿತು .
ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಹುಭಾಷಾ ಚಿತ್ರ ನಟಿ ಚಿರಾಶ್ರೀ ಅಂಚನ್ ಸೊರಕೆಯವರ ಪರ ಕಾಪು ಪೇಟೆಯಲ್ಲಿ ಮತ ಪ್ರಚಾರ ಮಾಡಿದರು.ಹಾಗು ವಿನಯ್ ಕುಮಾರ್ ಸೊರಕೆಯವರ ಪುತ್ರ ದ್ವಿಶಾನ್ ಸೊರಕೆ ಕೂಡ ತಂದೆ ಪರ ಮತ ಯಾಚಿಸಿದರು.
ಕಾರ್ಯಕ್ರಮದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಮಜೂರ್, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜಾ ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂತೋಶ್ ಬಂಗೇರ, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ನಿಯಾಝ್ ,ಪ್ರಭಾಕರ ಆಚಾರ್ಯ, ಹಮ್ರಝ್, ಕಾಪು ಪುರಸಭೆ ವ್ಯಾಪ್ತಿಯ ಅಧ್ಯಕ್ಷರಾದ ದಿಲ್ದರ್ ಶೇಕ್, ಕಾಂಗ್ರೆಸ್ ನಾಯಕರಾದ ,ದಿವಾಕರ್ ಶೆಟ್ಟಿ ,ಅಶೋಕ್ ಕೊಡವೂರ್ , ದಿನೇಶ್ ಕೋಟ್ಯಾನ್, ಹುಸ್ಮಾನ್ ಕಾಪು, ಕರುಣಾಕರ ಪಡುಬಿದ್ರಿ, ಗಣೇಶ್ ಕೋಟ್ಯಾನ್ ಪಡುಬಿದ್ರಿ , ದೀಪಕ್ ಎರ್ಮಾಳು ,ಹರೀಶ್ ನಾಯಕ್ ಮತ್ತು 300 ಕ್ಕೂ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರ ಉಪಸ್ಥಿತರಿದ್ದರು.
