ಕಾರ್ಕಳ: ಕಾಂತಾವರ ಶಾರದಾ ನಗರದ ಪ್ರಕೃತಿ ಪದವಿ ಪೂರ್ವ ಕಾಲೇಜಿನಲ್ಲಿ `ಶಿಕ್ಷಕ ರಕ್ಷಕ ಸಂಘ’ದ ಉದ್ಘಾಟನಾ ಕಾರ್ಯಕ್ರಮವು ಸೆ.8 ಶನಿವಾರದಂದು ನಡೆಯಿತು.

PTA 2018-2019 (1)

ಕಾರ್ಯಕ್ರಮವನ್ನು ಕಾಂತಾವರದ ಸಮಾಜ ಸೇವಕಿ ಮಾಲಿನಿ ರೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಸಂಘಗಳ ಔಚಿತ್ಯದ ಬಗ್ಗೆ ಗಮನ ಸೆಳೆದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪದ್ಮನಾಭ ಗೌಡ ಮಾತನಾಡಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಪ್ರಗತಿಯ ಬಗ್ಗೆ ಹಾಗೂ ಈ ಸಾಲಿಗಾಗಿ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಹೆತ್ತವರಿಗೆ ವಿವರಿಸಿದರು.
ಹಿರಿಯ ಉಪನ್ಯಾಸಕಿ ನಾಗರತ್ನ ಹೆತ್ತವರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜಯ ಪೂಜಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರೆ, ವರ್ಧಮಾನ ಇವರು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಾಂಶುಪಾಲರು ಜಂಟಿ ಕಾರ್ಯದರ್ಶಿಯಾಗಿ, ಹೆಚ್. ಜಿ. ಸುರೇಶ್ ಖಜಾಂಚಿಯಾಗಿ ನೇಮಕಗೊಂಡರು. ಉಳಿದಂತೆ ಶಂಕರ ಶೆಟ್ಟಿ, ಸುಶ್ಮಾ, ಸುನೀತಾ ಮತ್ತಿತರು ಸದಸ್ಯರಾಗಿ ಆಯ್ಕೆಯಾದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಸುಚೇತಾ ಸ್ವಾಗತಿಸಿ. ಚೈತ್ರಾ ಎಂ. ನಿರ್ವಹಿಸಿದರು. ಚೈತ್ರಶ್ರೀ ವಂದಿಸಿದರು.

By suddi9

Leave a Reply

Your email address will not be published. Required fields are marked *