ಮೂಲ್ಕಿ: ಕಲೆದ ತಿಂಗಳಲ್ಲಿ ಇಲ್ಲಿನ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಬೆಳ್ಳಿಯ ವಸ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ತಿರುಪೂರು ತಾಲೂಕಿನ ಅನುಪರಂಪಾಳಯಂ ನಿವಾಸಿ ಎಸ್. ನಾಗರಾಜ್ (30) ಎಂದು ಗುರುತಿಸಲಾಗಿದೆ.
ಭಂದಿತ ಆರೋಪಿಯಿಂದ ಬೆಳ್ಳಿಯ ಒಂದು ಖಡ್ಗ, 2 ಬೆಳ್ಳಿಯ ದೀಪ ಮತ್ತು ರಿಂಗ್ ಮತ್ತಿತರ ಬೆಲೆ ಬಾಳುವ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪಣಂಬೂರು ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ಮೂಲ್ಕಿ ಇನ್ಸ್ಪೆಕ್ಟರ್ ಶ್ರೀಕಾಂತ್ ಕೆ., ಎಸ್.ಐ. ಶೀತಲ್ ಅಲಗೂರು, ಎ.ಎಸ್.ಐ. ಚಂದ್ರಶೇಖರ್, ಸಿಬಂದಿ ವರ್ಗದ ಧರ್ಮೇಂದ್ರ, ಅಣ್ಣಪ್ಪ, ಸುರೇಶ್, ಮಹಮ್ಮದ್ ಹುಸೇನ್, ಬಸವರಾಜ, ಮನೋಜ್ ಕುಮಾರ್ ಭಾಗವಹಿಸಿದ್ದರು.

