515013c2-064c-43f6-8a6d-6464bb93f195

ಪೆರ್ಮುದೆ: ಸುಮಾರು ನಾಲ್ಕು ವರ್ಷಗಳ ಹಿಂದೆ ದೈವದ ಗುಡಿಯಿಂದ ಕಳವಾಗಿದ್ದ ದೈವದ ಮುಗವೊಂದು ಇಲ್ಲಿನ ರಾಯಲ್ ಗಾರ್ಡ್ ಬಸ್ ನಿಲ್ದಾನದ ಬಳಿಯಿರುವ ಮನೆಯೊಂದರ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಮಂಗಳವಾರ ವರದಿಯಾಗಿದೆ.

ಏನಿದು ಘಟನೆ?: ಸುಮಾರು ನಾಲ್ಕು ವರ್ಷಗಳ ಹಿಂದೆ ಪೆರ್ಮುದೆ ಭದ್ರಕೆರೆಯ ನಿವಾಸಿ ಯಾದವ ಕೋಟ್ಯಾನ್ ಅವರ ಮನೆಯ ದೈವದ ಗುಡಿಗೆ ತಡ ರಾತ್ರಿ ನುಗ್ಗಿದ ಕಳ್ಳರ ತಂಡವೊಂದು ಲೋಹದಿಂದ ನಿರ್ಮಿತವಾದ ದೈವದ ಮುಗ ಸಹಿತ ಲಕ್ಷಾನು ರೂ.ಮೌಲ್ಯದ ಚಿನ್ನ, ವಜ್ರ, ಬೆಳ್ಳಿಗಳನ್ನು ಕಳವುಮಾಡಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತಾದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದರು.

ಪತ್ತೆಯಾಗಿದ್ದು ಹೇಗೆ?: ಇಲ್ಲಿನ ಸಮೀಪದ ರಾಯಲ್ ಗಾರ್ಡ್ ಬಸ್ ನಿಲ್ದಾಣದ ಬಳಿಯಿರುವ ಮನೆಯೊಂದರ ಬಾವಿಯಲ್ಲಿ ಕೆಸರನ್ನು ಹೊರತೆಗೆಯುತ್ತಿದ್ದ ವೇಳೆ ಸುಮಾರು ಐದು ಕೆ.ಜಿ.ತೂಕವುಳ್ಳ ಪಂಚ ಲೋಹದಿಂದ ನಿರ್ಮಿಸಲಾದ ದೈವದ ಮುಗ ಪತ್ತೆಯಾಗಿದೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು ಪರಿಶೀಲನೆ ನಡೆಸಿದಾಗ ಯಾದವ ಅವರ ಮನೆಯ ಗುಡಿಯ ದೈವ ಎಂದು ಗುರುತಿಸಿದ್ದಾರೆ.

ದೈವದ ಮುಗದಲ್ಲಿದ್ದ ವಜ್ರದ ಕಣ್ಣು, ಚಿನ್ನದ ಸತ್ತಿಗೆ ಹಾಗೂ ಬೆಳ್ಳಿಯ ಪ್ರಭಾವಳಿಯನ್ನು ಆರೋಪಿಗಳು ಕಳುವು ಗೈದು ಬಳಿಕ ಮುಗವನ್ನು ಬಾವಿಗೆ ಎಸೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಮುಗವನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

5f276a4c-eda7-4884-9aa2-6699c2530319

By Suddi9

Leave a Reply

Your email address will not be published. Required fields are marked *