ಪೊಳಲಿ:ಟ್ಯಾಟೊ ಹಾಕುವ ವಿಚಾರದಲ್ಲಿ ಯುವಕರ ನಡುವೆ ಮಾತಿನ ಚಕಮಕಿ ನಡೆದಾಗ ಪೊಲೀಸರು ಯುವಕರನ್ನು ಚದುರಿಸಲು ಲಘು ಲಾಠಿಪ್ರಹಾರ ನಡೆಸಿ ಜನರನ್ನು ಚದುರಿಸಿದರು.
ಸಾಂದರ್ಭಿಕ ಚಿತ್ರ:

ಘಟನೆಯ ವಿವರ:
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು ಶುಕ್ರವಾರ ಅವಭೃತ ದಿನದಂದು ದೇವರ ಜಲಕದ ಉತ್ಸವ ನಡೆಯುತ್ತಿತ್ತು ಈ ಸಮಯದಲ್ಲಿ ಭಕ್ತರ ಸಂಖ್ಖೇ ಹೆಚ್ಚಾಗಿತ್ತು. ಈ ಸಂಧರ್ಭದಲ್ಲಿ ಟ್ಯಾಟೂ ಹಾಕುವ ವಿಚಾರದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವವರ ಮಧ್ಯೆ ಹಣದವಿಚಾರದಲ್ಲಿ ಮಾತಿನ ಚಕಮಕಿ ನಡೆದಾಗ ಅಲ್ಲಿಗೆ ಬಂದ ಪೊಲೀಸರು ತಗಾದೆ ಎತ್ತಿದ ಯುವಕನ್ನುವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅಲ್ಲಿದ್ದ ಯುವಕರು ಅವನನ್ನು ಪೊಲೀಸರಿಂದ ಬಿಡಿಸಿದಾಗ ಜನರು ಗುಂಪು ಸೇರಿದಾಗ ಪೊಲೀಸರು ಮುನ್ನೆಚರಿಕೆ ಕ್ರಮವಾಗಿ ಪೊಲೀಸರು ಲಘು ಲಾಟಿ ಚಾರ್ಜ ನಡೆಸಿದರು .
ಈ ಸಂದರ್ಭದಲ್ಲಿ ತಮ್ಮ ಕೈಗೆ ಸಿಕ್ಕಿದ ಯುವಕನನ್ನು ಪೊಲೀಸರು ಕರೆದುಕೊಂಡು ವಾಹನದಲ್ಲಿ ಕೂರಿಸಿದರು.ಇದರಿಂದ ಕೆರಳಿದಗುಂಪೊಂದು ಅಮಯಾಕ ಯುವಕನ್ನು ಬಿಟ್ಟು ಬಿಡಲು ಒತ್ತಾಯಿಸಿದರು. ಪರಿಸ್ಥಿತಿ ಕೈಮೀರುವುದನ್ನರಿತ ಪೊಲೀಸ್ ಅಧಿಕಾರಿ ಹೆಚ್ಚುವರಿಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು. ಇದನ್ನರಿತ ದೇವಳದ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಪರಿಣಾಮ ವಶಕ್ಕೆ ಪಡೆದುಕೊಂಡ ಯುವಕನನ್ನು ಬಿಡುಗಡೆಗೊಳಿಸಿದರು ಇದರಿಂದ ಬಿಗುವಿನ ಪರಿಸ್ಥಿತಿ ಶಾಂತವಾಯಿತು.
ಸೇರಿದ ಭಕ್ತಾಧಿಗಳು ಪೊಲೀಸರಿ ಲಾಟಿ ಪ್ರಹಾರ ನಡೆಸುವಂತ ಅನಿವಾರ್ಯ ಪರಿಸ್ಥಿತಿ ಉಂಟಾಗಿಲ್ಲಿ ಮಹಿಳೆಯರು ಸೇರಿದಂತೆ ಅಮಾಯಕ ಭಕ್ತಾಧಿಗಳ ಮೇಲೆ ಪೊಲೀಸರು ಲಾಟಿ ಬೀಸಿದ್ದಾರೆ ಎಂದು ಆರೋಪಿಸಿದ್ದಾರೆ
