ಮುಂಬೈ: ಅಪರೂಪದ ಖಾಯಿಲೆಯಿಂದ ಬಲಲುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಇರ್ಫಾನ್ ಖಾನ್ ಬಳಲುತ್ತಿದ್ದು, ಟ್ಯೂಮರ್ ಹಂತ ಕೊನೆಯದಾಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಅವರ ಈ ಸ್ಥಿತಿ ಜೀವಕ್ಕೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಈ ಕುರಿತು ಬಾಲಿವುಡ್ ಸಿನಿಮಾ ವರದಿಗಾರ ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

