ಬಂಟ್ವಾಳ: ಶ್ರೀ ಉದ್ಭವ ರೌದ್ರನಾಥ ದೇವಸ್ಥಾನ ನಡುಬೊಟ್ಟು ಇದರ ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕದ ವೈದಿಕ, ಧಾರ್ಮಿಕ ಕಾರ್ಯಕ್ರಮ ಎ.14ರಿಂದ 24ರವರೆಗೆ ಆಯೋಜಿಸಲಾಗಿದೆ.
ಈ ಹಿನ್ನಲೆಯಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆ ಎ.15ರಂದು ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಶರವು ಮಹಾಗಣಪತಿ ದೇವಸ್ಥಾನ ಮಂಗಳೂರಿನಿಂದ ‘ಸ್ವರ್ಣ ಶಿಖರ’ ಮತ್ತು ದೇವಿಗೆ ಬೆಳ್ಳಿಯ ಪ್ರಭಾವಳಿ , ಬೆಳ್ಳಿಯ ಮುಖವಾಡ ಹಾಗೂ ದೇವರ ಪುಷ್ಪ ಕನ್ನಡಿಯೊಂದಿಗೆ ಹಸಿರು ಹೊರೆ ಕಾಣಿಕೆಯು ಉದ್ಘಾಟನೆಗೊಂಡು ಮೆರವಣಿಗೆಯೊಂದಿಗೆ 10.30ಕ್ಕೆ ಬಿ.ಸಿ.ರೋಡ್ ರ ಕ್ತೇಶ್ವರೀ ದೇವಸ್ಥಾನ ತಲುಪಲಿದ್ದು, ಬಂಟ್ವಾಳ ತಾಲೂಕಿನ ಭಕ್ತಾದಿಗಳು ಬೆಳ್ತಿಗೆ ಅಕ್ಕಿ, ತರಕಾರಿ, ತೆಂಗಿನಕಾಯಿ,ಸೀಯಾಳ, ಬಾಳೆಹಣ್ಣು , ಎಣ್ಣೆ, ಬೆಲ್ಲ ಇತ್ಯಾದಿಗಳನ್ನು 10.30ರ ಒಳಗೆ ಬಿ.ಸಿ.ರೋಡ್ ರ ಕ್ತೇಶ್ವರೀ ದೇವಸ್ಥಾನಕ್ಕೆ ತಲುಪಿಸಬೇಕಾಗಿಯೂ, ವಾಹನದಲ್ಲಿ ತರುವವರು ಕೂಡಾ ಕ್ಲಪ್ತ ಸಮಯಕ್ಕೆ ತಲುಪಿಸುಬೇಕು ಹಾಗೂ ಹೊರೆಕಾಣಿಕೆ ಮೆರವಣಿಗೆಯಲ್ಲಿ ವಾಹನ ಸಮೇತ ಭಕ್ತಾದಿಗಳು ಪಾಲ್ಗೊಂಡು ಭವ್ಯವಾದ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟನೆ ಕೋರಿದೆ.
