IMG20180410174944

ಬಂಟ್ವಾಳ: ಮದುವೆ ನಿಶ್ಚಿತ ವಾಗಿದ್ದ ಯುವತಿಯೋರ್ವಳು ಮನೆಯಿಂದ  ಕಾಣೆಯಾಗಿರುವ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮದಲ್ಲಿ ನಡೆದಿದೆ.

ನರಿಕೊಂಬು ಗ್ರಾಮದ ಕಲ್ಯಾರು ನಿವಾಸಿ ಕೀರ್ತಿ (20) ಕಾಣೆಯಾದ ಯವತಿ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಮನೆ ಮಂದಿಯ ಜತೆಗೆ ಊಟ ಮುಗಿಸಿ ಕೋಣೆಯಲ್ಲಿ ಮಲಗಿದ್ದ ಕೀರ್ತಿ ಗುರುವಾರ ಬೆಳಗ್ಗೆ 6ಕ್ಕೆ ಮಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿತು. ಮನೆಯ ಅಂಗಳದಲ್ಲಿ ವಾಹನ ಚಕ್ರದ ಗುರುತು ಇದ್ದು ಯಾವುದೋ ವಾಹನದಲ್ಲಿ ಬಂದು ಕೀರ್ತಿ ಯನ್ನು ಕರೆದುಕೊಂಡು ಹೋಗಿರಬೇಕು ಎಂದು ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೀರ್ತಿಗೆ ಮೇ. 2 ರಂದು ಮದುವೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಕೂಡಾ ನಡೆದಿದೆ. ನಗರ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *