Ramanath_Rai_760x400

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರಂತೆ ಹೆಸರಿಗೆ ಮಾತ್ರ ನಂಬರ್ 1 ಆಗಿರದೆ ಕೆಲಸದಲ್ಲಿ ನಂಬರ್-1 ಆಗಬೇಕು ಎಂದು ಸಚಿವ ರಮಾನಾಥ ರೈ ಕಿಡಿಕಾರಿದ್ದಾರೆ.

ತಾಲೂಕಿನ ಸಿದ್ದಕಟ್ಟೆಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸುಮಾರು 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಅವರು ಮಾತನಾಡಿದರು.

ಬಿಜೆಪಿಯು ಕಾಂಗ್ರೆಸ್ ಜೇನುಗೂಡಿಗೆ ಕೈ ಹಾಕುವ ಮೂಲಕ ನಮ್ಮನ್ನು ಪ್ರಚೋದಿಸಿದೆ. ಕಾಂಗ್ರೆಸ್ ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ ಅವರು, ನಾನು ಆರು ಬಾರಿ ಶಾಸಕನಾಗಿ, ವಿವಿಧ ಖಾತೆಗಳ ಸಚಿವನಾಗಿ ಅಭಿವೃದ್ಧಿ ಕೆಲಸಗಳ ಹಿನ್ನೆಲೆಯಲ್ಲಿ ಮತಯಾಚಿಸುತ್ತಿದ್ದೇನೆ ಎಂದರು.

By Suddi9

Leave a Reply

Your email address will not be published. Required fields are marked *