ನವದೆಹಲಿ: ಕಳೆದ ಐದಾರು ತಿಂಗಳಿನಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾದ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯರೇ ಆಗಿರುವ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಟೀಂ ಇಂಡಿಯಾದ ಹೊರಗೆ ಒಳಗೆ ಎಲ್ಲವನ್ನೂ ತಿಳಿದಿರುವ ರಾಹುಲ್ ದ್ರಾವಿಡ್ ಅವರೇ ಸೂಕ್ತ ಎಂಬ ನಿಧರ್ಾರಕ್ಕೆ ಬಂದಿರುವ ಬಿಸಿಸಿಐ, ತಾಳ್ಮೆಯ ಆಟಗಾರ ಆಗಿರುವ ರಾಹುಲ್ ದ್ರಾವಿಡ್ ಟೀಂ ಅನ್ನು ಉತ್ತಮವಾಗಿ ಮುನ್ನಡೆಸಬಲ್ಲರು ಎಂದು ತೀಮರ್ಾನಿಸಿದಂತಿದೆ. ಅಲ್ಲದೆ ಟೀಂ ಇಂಡಿಯಾದ ಸದಸ್ಯರು ಕೂಡಾ ದ್ರಾವಿಡ್ಗೆ ಸಹಮತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಹಾಳಿ ಕೋಚ್ ಆಗಿರುವ ಡಂಕನ್ ಫ್ಲೆಚರ್ ಈಗಾಗಲೇ ಸ್ಥಾನ ಕಳೆದುಕೊಂಡಿದ್ದು, ಆದಷ್ಟು ಬೇಗ ಒಬ್ಬ ಉತ್ತಮ ಕೋಚ್ ನಿಯೋಜಿಸಿ ಟೀಂ ಇಂಡಿಯಾದ ಜಿಡ್ಡು ತೆಗೆಯಲು ಬಿಸಿಸಿಐ ಮುಂದಾಗಿದೆ.
ಅಲ್ಲದೆ ಇನ್ನೊಬ್ಬ ಯಶಸ್ವಿ ಆಟಗಾರ ಅನಿಲ್ ಕುಂಬ್ಲೆಯ ಹೆಸರು ಕೂಡಾ ರೇಸ್ನಲ್ಲಿದೆ. ಅದರಂತೆ ಸೌರವ್ ಗಂಗೂಲಿ, ಶೇನ್ ವಾರ್ನ್, ಸ್ಟೀಫನ್ ಪ್ಲೆಮಿಂಗ್ ಹೆಸರು ಕೇಳಿಬರುತ್ತಿದೆ.
