ಅಚ್ರೋಲ್ (ರಾಜಸ್ತಾನ): ಮಹಾಪುರುಷರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಪ್ರಕರಣಗಳು ಇನ್ನೂ ಮುಂದುವರಿದಿದ್ದು, ಇದೀಗ ರಾಜಸ್ತಾನದ ಅಚ್ರೋಲ್ ನಲ್ಲಿ ಕಿಡಿಗೇಡಿಗಳು ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಧಕ್ಕೆ ಉಂಟುಮಾಡಿದ್ದಾರೆ.
ನಾಥದ್ವಾರದಲ್ಲಿ ನಿನ್ನೆಯಷ್ಟೇ ಮಹಾತ್ಮಾಗಾಂಧಿ ಪ್ರತಿಮೆಯೊಂದು ಧಕ್ಕೆಗೊಳಗಾಗಿತ್ತು.
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರ ಪ್ರತಿಮೆಯ ಮುಖಕ್ಕೆ ಮಸಿ ಬಳಿಯುವ ಮೂಲಕ ವಿರೂಪಗೊಳಿಸಿದ ಪ್ರಕರಣ ಕಳೆದ ತಿಂಗಳು ಪಶ್ಚಿಮ ಬಂಗಾಲದಲ್ಲಿ ನಡೆದಿತ್ತು.
ಹಾಗೆಯೇ ಆಸ್ಸಾಂನಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಂಪ್ರಸಾದ ಮುಖರ್ಜಿ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು.
(ಮೂಲ: ಎ ಎನ್ ಐ)

