ಸುದ್ದಿ9 ಬಂಟ್ವಾಳ: ವಿಧ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಾಗಬೇಕಾದರೆ ಪಾಲಕರು ಅದರಲ್ಲಿ ತೊಡಗಿಸಿಕೊಳ್ಳಬೇಕೆಂದು ಪೊಳಲಿ ತಪೋವನದ ಸ್ವಾಮೀಜಿ ಶ್ರೀ ವಿವೇಕ ಚೈತನ್ಯ ತಿಳಿಸಿದರು. ಅವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಷಕರಿಗೆ ತಿಳಿಮಾತು ಹೇಳಿದರು.

ಪೋಷಕರು ಮಕ್ಕಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿರಬೇಕು, ಮಕ್ಕಳ ತಪ್ಪನ್ನು ತಿದ್ದುವಲ್ಲಿ ಪೋಷಕರು ಸಹಕರಿಸಬೆಕು. ತಮ್ಮ ಮಕ್ಕಳು ತಪ್ಪು ದಾರಿಯನ್ನು ತುಳಿಯದ ಹಾಗೆ ನೋಡಿಕೊಳ್ಳಬೇಕು. ಈ ಎಲ್ಲಾ ಅಂಶಗಳು ಮಕ್ಕಳಲ್ಲಿ ಮೈಗೂಡಬೇಕಾದರೆ ನಾವು ಶ್ರೀರಾಮದಂತಹ ಸಂಸ್ಕಾರಯುತ ಸಂಸ್ಥೆಗೆ ಕಳುಹಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಡಾ. ಪ್ರಬಾಕರ ಭಟ್ ವಹಿಸಿ ಈ ಸಂಸ್ಥೆಯಲ್ಲಿ ಸಂಸ್ಕಾರ ಪ್ರಧಾನವಾದ ಶಿಕ್ಷಣವನ್ನೇ ನೀಡುತ್ತಿದ್ದೇವೆ. ಸಂಸ್ಥೆಗೆ ಸಾಮಾನ್ಯ ಜನರ ವಿದ್ಯಾರ್ಥಿಗಳು ಬರುವುದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪ್ರಸ್ತುತವಾಗಿ ವಿದ್ಯಾರ್ಥಿಗಳಿಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಪ್ರಸ್ತುತ ಪಡಿಸುವುದು ಅನಿವಾರ್ಯ, ಎಲ್ಲರೂ ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸಿದಾಗ ಅದು ಸಾಧ್ಯವೆಂದರು.

ಪೋಷಕರ ಜೊತೆ ಸಂವಾದವನ್ನು ಮಾಡಲು ಅವಕಾಶ ಮಾಡಿಕೊಡಲಾಯಿತು. ಕಾಲೇಜಿನ ಹಿಂದಿನ ಶೈಕ್ಷಣಿಕ ಸಾಲಿನ ನೂರು ಶೇಕಡ ಫಲಿತಾಂಶ ಮತ್ತು ಕಾಲೇಜಿನ ವಿವಿಧ ಚಟುವಟಿಕೆಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ತಿಳಿಸಿದರು.
ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ರವಿರಾಜಾರಾಮವರ್ಮ ಸ್ವಾಗತಿಸಿದರೆ, ಗಣಿತ ಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿದರು. ಹಿಂದಿ ಉಪನ್ಯಾಸಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *