ಮೂಡುಬಿದಿರೆ: ಮಹಿಳೆಯೋರ್ವರು ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಇಲ್ಲಿನ ಮೂಡುಮಾರ್ನಾಡು ಗ್ರಾಮದಲ್ಲಿ ಸೋಮವಾರ ಸಾಯಂಕಾಲ ನಡೆದಿದೆ.
ಮೂಡುಮಾರ್ನಾಡು ಮುಲ್ಲಗುಡ್ಡೆ ನಿವಾಸಿ ನಳಿನಿ ಪೂಜಾರ್‍ತಿ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ನಳಿನಿ ಅವರು ಸಾಯಂಕಾಲ ಬಾವಿಯಿಂದ ಪಂಪ್ ಮುಖಾಂತರ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ಸಂದರ್ಭ ಬಾವಿಯಲ್ಲಿ ನೀರು ನೋಡಲು ಇಣುಕಿದ ಸಂದರ್ಭದಲ್ಲಿ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಧವೆಯಾಗಿದ್ದ ನಳಿನಿ ಅವರಿಗೆ ಇಬ್ಬರು ಹೆಣ್ಣ ಮಕ್ಕಳಿದ್ದಾರೆ.

