ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧದ ಹೋರಾಟಗಾರ ನೆಲ್ಸನ್ ಮಂಡೇಲ ಅವರ ಪತ್ನಿ ವಿನ್ನಿ ಮಂಡೇಲಾ(81) ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ.
ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ವಿನ್ನಿ ಮಂಡೇಲಾ ಭಾಗವಹಿಸಿದ್ದರು. ನೆಲ್ಸನ್ ಮಂಡೇಲಾ ಅವರ ಜೊತೆ ಸುಮಾರು 38 ವರ್ಷಗಳ ಕಾಲ ಅವರು ದಾಂಪತ್ಯ ನಡೆಸಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ.

