ಬಂಟ್ವಾಳ: ಸಿದ್ದಕಟ್ಟೆ ಕಾಂಗ್ರೇಸ್ ಗ್ರಾ.ಪಂ.ಮಾಜಿ ಅದ್ಯಕ್ಷೆ ಕವಿತಾ ಬಿ.ಶೆಟ್ಟಿಗಾರ್, ಮಾಜಿ ಅದ್ಯಕ್ಷೆ ವಸಂತಿ ಪೂಜಾರಿ, ಮತ್ತು ಅವರ ಬೆಂಬಲಿಗರು ಬಿಸಿರೋಡಿನ ಬಿಜೆಪಿ ಪಕ್ಷದ ಕಚೇರಿಯ ಲ್ಲಿ ಬಿಜೆಪಿ ನಾಯಕ ರಾಜೇಶ್ ನಾಯಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಅದ್ಯಕ್ಷ ದೇವದಾಸ ಶೆಟ್ಟಿ ಅವರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಅಧಿಕೃತ ವಾಗಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಪ್ರಮುಖರಾದ ಹರಿಕ್ರಷ್ಣ ಬಂಟ್ವಾಳ, ಪ್ರಭಾಕರ ಪ್ರಭು , ಸತೀಶ ಮತ್ತಿತರರು ಉಪಸ್ಥಿತರಿದ್ದರು.
