ಪೊಳಲಿ: ನಿವೇದಿತಾ ಅವರ ಸೇವಾ ಮನೋಭಾವ, ತ್ಯಾಗ ಕಲ್ಪನೆ, ಆಧ್ಯಾತ್ಮದ ದೃಷ್ಟಿಕೋನ ಹಾಗೂ ಹೋರಾಟದ ಪ್ರವೃತ್ತಿ ಎಲ್ಲವನ್ನೂ ಮೈಗೂಡಿಸಿಕೊಂಡು ಪ್ರತಿಷ್ಠಾನದ ಕಾರ್ಯಕರ್ತೆಯರು ಬೆಳೆಯಬೇಕು ಎಂದು ಪ್ರತಿಷ್ಠಾನದ ಮಾರ್ಗದರ್ಶಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿವಿ ಮಾತು ಹೇಳಿದ್ದಾರೆ.

ರವಿವಾರ ಇಲ್ಲಿನ ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ರಾಮನವಮಿಯ ಆಚರಣೆ ಸಂದರ್ಭದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ರಾಜ್ಯ ಮಟ್ಟದ `ದೀಕ್ಷಾ ದಿವಸ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

28vpniveditha

ಐರ್ಲೆಂಡಿನಿಂದ ಭಾರತಕ್ಕೆ ಆಗಮಿಸಿದ್ದ ಮಾರ್ಗರೆಟ್ ಎಂಬಾಕೆ ಸ್ವಾಮಿ ವಿವೇಕಾನಂದರಿಂದ ದೀಕ್ಷೆ ಪಡೆದು ನಿವೇದಿತಾರಾಗಿರುವುದು ಮಾರ್ಚ್ 25ರಂದು. ರಾಮನಮಮಿಯ ಶುಭ ಸಂದರ್ಭದಲ್ಲಿ ಇಲ್ಲಿನ ಸೋದರಿ ನಿವೇದಿತಾ ಪ್ರತಿಷ್ಠಾನ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತ್ತದೆ  ಎಂದು ನಾವು ಕಲ್ಪನೆ  ಮಾಡಿರಲಿಲ್ಲ. ಪ್ರಾಯಶಃ ಈ ರೀತಿಯಾಗಿ ದೀಕ್ಷಾ ದಿವಸ ಆಚರಣೆ ನಡೆದಿರುವುದು ದೇಶದಲ್ಲೇ ಇಲ್ಲಿ ಮಾತ್ರ ಎಂದನ್ನಿಸುತ್ತಿದೆ. ಇದು ನಿಜಕ್ಕೂ ಅಭಿಮಾನದ ಸಂಗತಿ ಎಂದು ಅಭಿಪ್ರಾಯಪಟ್ಟರು.

001

ಮುಂಬರುವ ದಿನದಲ್ಲಿ ಪ್ರತಿಷ್ಠಾನವು `ನಿವೇದಿತಾ ರಥಯಾತ್ರೆ’ ಕೈಗೊಳ್ಳಲಿದೆ ಎಂದರು.

ವಿವೇಕಾನಂದರು ತಮ್ಮ ಶಿಷ್ಯೆ ಮಾರ್ಗರೆಟ್ಟಳಿಗೆ ಶಿವಪೂಜೆಯೊಂದಿಗೆ ದೀಕ್ಷೆ ನೀಡಿ ನಿವೇದಿತಾರನ್ನಾಗಿಸಿ ಪರಿವರ್ತಿಸಿದ್ದರು. ಇದರ ಸ್ಮರಣಾರ್ಥ ಪ್ರತಿಷ್ಠಾನದ ಸೋದರಿಯರು `ಶ್ರೀ ವಿವೇಕಾನಂದ ನಮಃ’ ಎನ್ನುವ ಮಂತ್ರ 108 ಬಾರಿ ಪಠಿಸಿ, ಶಿವಲಿಂಗಕ್ಕೆ ಬಿಲ್ವ ಹಾಗೂ ಪುಷ್ಪ ಏರಿಸಿದರು. ಜಯರಾಮ ಬಾಟಿಯಾ ಶ್ರೀಮಾತೆಯರ ಮನೆಯ ಪಕ್ಕದಲ್ಲಿರುವ ಸಿಂಹವಾಹಿನಿ ದೇವಸ್ಥಾನದ ಭೂಮಿಯ ಮೃತ್ತಿಕೆ(ಶಾರದಾ ಮಾತೆಯ ರೋಗ ಗುಣಪಡಿಸಿದ ಸಿಂಹವಾಹಿನಿಯ ಈ ಸ್ಥಳ ವಿಶೇಷ ಶಕ್ತಿ ಹೊಂದಿದೆ ಎನ್ನುವ ನಂಬಿಕೆ ಇದೆ) ಧರಿಸಿದ ಪ್ರತಿಷ್ಠಾನದ ಸೋದರಿಯರಿಗೆ ತಾಯಿಯ ಕೃಪೆ ಸಿಕ್ಕಿರುವುದು ಸೌಭಾಗ್ಯವೇ ಸರಿ.001

ದೀಕ್ಷಾ ದಿನದಂದು ಶಿವಲಿಂಗದೊಂದಿಗೆ ಒಣಗಿದ ಮಾವಿನ ಎಲೆ ಹಾಗೂ ಬಿಲ್ವ ಫಲ ಇಡಲಾಗಿತ್ತು. ಇದಕ್ಕೂ ವಿಶೇಷ ಮಹತ್ವವಿದೆ. ರಾಮಕೃಷ್ಣ ಪರಮಹಂಸರು ಕೋಶಿಪುರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಸಂದರ್ಭದಲ್ಲಿ ಯಾವ ಮರದ ಕೆಳಗೆ ಕುಳಿತು ಭಕ್ತರ ಅಭಿಲಾಷೆ ಈಡೇರಿಸಿದ್ದರೋ ಅದೇ ಮರದ ಎಲೆಯೊಂದು ಹಾಗೂ ಶ್ರೀಮಾತೆಯವರ ತಾಯಿಯ ತವರೂರಾದ ಸಿಹೋರಿನ ದೇವಸ್ಥಾನದ ಸಮೀಪದಲ್ಲಿರುವ ಬಿಲ್ವ ವೃಕ್ಷದ ಫಲ ತಂದು ಪೂಜಿಸಲಾಯಿತು.

 

By suddi9

Leave a Reply

Your email address will not be published. Required fields are marked *