ಬಂಟ್ವಾಳ: ಅಮೃತ ಸಂಜೀವಿನಿ ಮಂಗಳೂರು ಇದರ 31ನೇ ಸೇವಾ ಯೋಜನೆಯ ಪ್ರಯುಕ್ತ ಇಲ್ಲಿನ ಕೆದಿಲಯ ಶ್ರೀ ದೇವಿ ಭಜನಾ ಮಂದಿರದಲ್ಲಿ ಸಂಜೀವಿನಿ ಸೇವಾ ಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಸಿದ ಬಳಿಕ ತಾಲೂಕಿನ 6 ಅನಾರೋಗ್ಯ ಪೀಡಿತ ಕುಟುಂಬದ ಚಿಕಿತ್ಸೆಗೆ 1,35,000 ರೂ. ವಿತರಿಸಲಾಯಿತು.
ಈ ವೇಳೆ ಕೆದಿಲ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಭಂದಕ ಚೆನ್ನಪ್ಪ ಗೌಢ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರ್ಗದರ್ಶಕ ವಜ್ರದೇಹಿ ಶ್ರೀ ಆಶೀರ್ವಚನ ನೀಡಿದರು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷ ಕಾಂತಪ್ಪ ಗೌಢ ಕೊಳಚಪ್ಪು ಅಧ್ಯಕ್ಷತೆ ವಹಿಸಿದ್ದರು. ಸಂಜೀವಿನಿ ಹಿಂದೂ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು, ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ, ಅಮೃತಸಂಜೀವಿನಿಯ ಸುಶಾಂತ್ ಅಮೀನ್ ಚಕ್ರತೀರ್ಥ, ಯುವ ವೇದಿಕೆ ಪೆರಾಜೆ ಸಂಚಾಲಕ ರಾಜಾರಾಮ್ ಭಟ್, ಶ್ರೀ ರಾಮ ಭಜನಾ ಮಂದಿರ ಕಡೇಶಿವಾಲಯದ ಅಧ್ಯಕ್ಷ ಭಾಸ್ಕರ್ ಮುಂಡಾಲ, ಕೆದಿಲ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಭಂದಕ ಚೆನ್ನಪ್ಪ ಗೌಡ ಕುದುಮಾನ್ ಮತ್ತಿತರರು ಉಪಸ್ಥಿತರಿದ್ದರು. ಶೆಟ್ಟಿ ಕಡೇಶಿವಾಲಯ ನಿರ್ವಹಿಸಿದರು, ಕಾರ್ಯಕ್ರಮದಲ್ಲಿ ಉಮೇಶ್ ಕೆದಿಲ ಸ್ವಾಗತಿಸಿದರು.



