ಬಂಟ್ವಾಳ: ಭಾರೀ ಕುತೂಹಲ ಕೆರಳಿಸಿದ್ದ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಮ್ಲಾನ್ ಮಾರಿಪಳ್ಳ ಆಯ್ಕೆಯಾಗಿದ್ದಾರೆ.
ಪುದು ಗ್ರಾ.ಪಂನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲೀಡಿಯಾ ಪಿಂಟೊ ಆಯ್ಕೆಯಾದರು.
34 ಸದಸ್ಯ ಬಲ ಹೊಂದಿರುವ ಪುದು ಗ್ರಾಮ ಪಂಚಾಯತ್ ನಲ್ಲಿ 27 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ 6 ಮತ್ತು ಎಸ್ ಡಿ ಪಿ ಐ 1 ಸದಸ್ಯ ಬಲವನ್ನು ಹೊಂದಿದೆ.

