ಕುಂದಾಪುರ: ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಗು ದಾರುಣ ಮೃತಪಟ್ಟಿರುವ ಘಟನೆ ತಾಲೂಕಿನ ಶಂಕರನಾರಾಯಣ ಪೇಟೆಯಲ್ಲಿ ರವಿವಾರ ರಾತ್ರಿ ನಡೆದಿದೆ.
ಅಂಪಾರು ನಿವಾಸಿ ವಾಸು ಮತ್ತು ವಸಂತಿ ಅವರ ಪುತ್ರಿ ಸಿಂಚನ (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸಿಂಚನರವರ ತಾಯಿ ವಸಂತಿರವರ ಅನಾರೋಗ್ಯ ಹಿನ್ನೆಲೆಯಲ್ಲಿ ಅವರ ಪರಿಚಯರಾದ ಹಳ್ಲನಾಡು ನಿವಾಸಿ ಕೃಷ್ಣ ಎಂಬರವರ ಜತೆ ಶಂಕರನಾರಾಯಣ ಆಸ್ಪತ್ರೆಗೆ ತೆರಳಿ, ತಾಯಿಗೆ ಔಷಧಿ ತೆಗೆದುಕೊಂಡು ಬೈಕ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲಿ ಮೃತ ಪಟ್ಟಿದ್ದು , ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆ. ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪ್ರತ್ರೆಯಲ್ಲಿ ಇರಿಸಲಾಗಿದ್ದು, ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

