ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕುಮ್ಡೇಲು ಬಳಿ ದ.ಕ.ಜಿ.ಪಂಚಾಯತ್ ಶಾಲೆಯಿಂದ ಕೊರಗಜ್ಜ ಗುಡಿಯವರೆಗಿನ ಸಂಪರ್ಕ ರಸ್ತೆಗೆ ಸಂಸದರ ನಿಧಿಯಿಂದ ಮೂರು ಲಕ್ಷ ರೂ. ಅನುದಾನದಿಂದ ಕಾಕ್ರೀಟಿಕೃತ ರಸ್ತೆ ನಿರ್ಮಾಣಕ್ಕೆ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮಸ್ಥರ ಆಶೋತ್ತರಗಳಿಗೆ ಸ್ಪಂದಿಸುವುದು ಪಂಚಾಯತ್ ಸದಸ್ಯರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕುಮ್ಡೇಲು ವಾರ್ಡಿನ ಪಂಚಾಯತ್ ಸದಸ್ಯರು ಪಂಚಾಯತ್ ಅನುದಾನ ಮಾತ್ರವಲ್ಲ, ಇನ್ನಿತರ ಮೂಲಗಳಿಂದಲೂ ಅನುದಾನವನ್ನು ತಂದು ಜನರ ಬೇಡಿಕೆಗಳನ್ನು ಪೂರೈಸಿರುವುದು ಬಹಳ ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ, ಗಣೇಶ್ ಸುವರ್ಣ ತುಂಬೆ, ಮನೋಜ್ ಆಚಾರ್ಯ ನಾಣ್ಯ, ಆಶಾನಯನ, ಜಯಂತಿ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಸುಜೀರು, ಎಪಿಎಂಪಿ ಸದಸ್ಯ ವಿಠಲ ಸಾಲ್ಯಾನ್, ಪುದು ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು.

