ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಡುಬೈಲು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಸುಮಾರು 10 ಲಕ್ಷ ರೂ.ವೆಚಚದಲ್ಲಿ ನಿರ್ಮಾಣಗೊಳ್ಳುವ ಕಾಮಗಾರಿಗೆ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸಂತೋಷ್ ನೆತ್ತರಕೆರೆ, ನಾಗವೇಣಿ, ಸರೋಜಿನಿ, ಮಂಗಳೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಸುಜೀರು, ಜಯಶ್ರೀ, ಗಣೇಶ್ ಸುವರ್ಣ ತುಂಬೆ, ಸತೀಶ್ ನಾಯ್ಗ, ಎಪಿಎಂಸಿ ಸದಸ್ಯ ವಿಠಲ ಸಾಲ್ಯಾನ್, ಪುದು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಿನೇಶ್. ಆರ್. ಶೆಟ್ಟಿ ಕೊಟ್ಟಿಂಜ, ಪುದು ಬಿಜೆಪಿ ಅಧ್ಯಕ್ಷ ಧೀರಜ್ ಮಾರಿಪಳ್ಳ, ಮಾಜಿ ಪಂಚಾಯತ್ ಸದಸ್ಯರಾದ ಜಗದೀಶ, ವಸಂತ ಶೆಟ್ಟಿ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.

