ಮಡಿಕೇರಿ: ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರೊಬ್ಬರು ಲಾಂಗ್ ಹಿಡಿದು ಪುಂಡಾಟ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.
ತೇಜ್ ಕುಮಾರ್ ಈ ಕೃತ್ಯವೆಸಗಿದ ಮುಖಂಡ. ಕೊಡ್ಲಿ ಪೇಟೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಲ್ಲಿ ಗುರತಿಸಿಕೊಂಡಿರುವ ತೇಜ್ ಕುಮಾರ್ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದು, ಚೀಟಿ ಹಣದ ವಿಚಾರಕ್ಕೆ ಸ್ಥಳೀಯರಿಗೆ ಲಾಂಗ್ ತೋರಿಸಿ ರೌಡಿಸಂ ಮಾಡಿದ್ದಾನೆ ಎನ್ನಲಾಗಿದೆ.
ತೇಜ್ ಕುಮಾರ್ ಕೆಲವು ತಿಂಗಳ ಹಿಂದೆ ಹಣದ ವಿಚಾರಕ್ಕೆ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ತೇಜ್ ಕುಮಾರ್ ತನ್ನ ಪೆಟ್ರೋಲ್ ಬಂಕ್ ಬಳಿ ನಿಂತು ಕಾರಿನಿಂದ ಲಾಂಗ್ ತೆಗೆದು ಅವಾಝ್ ಹಾಕಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

