c74b41a332b8f9f6dd847d15a3562c53

ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಮ್ಯಾನೇಜರ್ ಮುನಿಸ್ವಾಮಿ ದೂರು ನೀಡಿದ್ದಾರೆ. ತಮಿಳುನಾಡು ಕಲಾವಿದರ ಸಂಘದಲ್ಲಿ ನಟಿಯ ವಿರುದ್ಧ ಸಂಬಳ ನೀಡಿಲ್ಲವೆಂದು ಆರೋಪ ಮಾಡಿದ್ದಾರೆ.

ನಾನು ಹಲವು ವರ್ಷಗಳಿಂದ ಹನ್ಸಿಕಾ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಬಹಳ ದಿನಗಳಿಂದ ಹನ್ಸಿಕಾ ನನಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದ್ರೆ, ಚಿತ್ರರಂಗದಲ್ಲಿರುವವರ ಪ್ರಕಾರ ”ಹನ್ಸಿಕಾ ಅವರ ಮೊದಲ ಸಿನಿಮಾದಿಂದ ಇದುವರೆಗೂ ಹನ್ಸಿಕಾ ಅವರ ತಾಯಿ ಮೋನಾ ಮೊಟ್ವಾನಿ ಅವರೇ ಡೇಟ್, ಸಂಭಾವನೆಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನುತ್ತಿದ್ದಾರೆ.

ಇನ್ನು ಈ ಸಂಬಂಧ ಹನ್ಸಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಮ್ಯಾನೇಜರ್ ಮುನಿಸ್ವಾಮಿ ಅವರ ದೂರಿನಲ್ಲಿ ಸತ್ಯ ಕಂಡು ಬಂದರೇ ಹನ್ಸಿಕಾ ಅವರು ತಮಿಳುನಾಡು ಕಲಾವಿದರ ಸಂಘ ಅಥವಾ ದಕ್ಷಿಣ ಭಾರತ ಕಲಾವಿದರ ಸಂಘಕ್ಕೆ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಬೇಕಾಗುತ್ತೆ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಬಿಂದಾಸ್’ ಚಿತ್ರದಲ್ಲಿ ನಟಿಸಿರುವ ಹನ್ಸಿಕಾ ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ದೇಶಮುದುರು’ ಚಿತ್ರದ ಮೂಲಕ ನಾಯಕಿಯಾದ ಹನ್ಸಿಕಾ, ‘ಕಂತ್ರಿ’, ‘ಓ ಮೈ ಫ್ರೆಂಡ್’, ‘ಸಿಂಗಂ-2’, ‘ಪವರ್’, ‘ಬಿರಿಯಾನಿ’, ‘ವಾಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

By Suddi9

Leave a Reply

Your email address will not be published. Required fields are marked *