eggs-2-thehigherlearningDOTcom

ಯಾವ ದಿನ ಯಾವ ಸಾರು ಮಾಡಬೇಕು ? ಎಂದು ತಲೆ ಬಿಸಿ ಮಾಡಿಕೊಳ್ಳುವವರಿಗೆ ಥಟ್ಟನೆ ನೆನಪಾಗುವುದು ಕೋಳಿ ಮೊಟ್ಟೆ. ಮೊಟ್ಟೆ ಅವಿವಾಹಿತರ ಆರಾಧ್ಯ ದೈವವೆಂದೇ ಹೇಳಬಹುದು.. ಸಾಂಬಾರ್ ಯಾವುದೇ ಆಗಲಿ ಪಕ್ಕಕ್ಕೆ ನೆಂಜಿಕೊಳ್ಳಲು ಆಮ್ಲೆಟ್ ಇದ್ದರೆ ಸಾಕು… ಶಕ್ತಿವಂತರಾಗಲು ದಿನಕ್ಕೊಂದು ಮೊಟ್ಟೆ ತಿನ್ನಿ ಎಂದು ಸರಕಾರವೇ ಹೇಳುತ್ತಿದೆಯಲ್ಲಾ?

ಮೊಟ್ಟೆಯ ಕಾರುಬಾರಿಲ್ಲದ ಅಡುಗೆ ಮನೆ ವಿರಳವೆಂದೇ ಹೇಳಬಹುದು. ಶಾಪಿಂಗ್ ಗೆ ಹೋದವರು ….ಬೇಕಾದಾಗ ಉಪಯೋಗಿಸಲು ಅನುಕೂಲಕರವಾಗಿರಲೆಂದು ಡಜನ್ ಗಟ್ಟಲೆ ಕೋಳಿ ಮೊಟ್ಟೆಗಳನ್ನು ತಂದು ಫ್ರಿಡ್ಜ್ ನಲ್ಲಿಡುತ್ತಾರೆ. ಆದರೆ, ಕೋಳಿಮೊಟ್ಟೆಗಳನ್ನು ಹೀಗೆ ಫ್ರಿಡ್ಜ್ ನಲ್ಲಿ ಡುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿಯೋಣ.

  • ಪ್ರಿಡ್ಜ್ ನಲ್ಲಿ ಇಟ್ಟಿರುವ ಕೋಳಿ ಮೊಟ್ಟೆಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆಂದು ತಜ್ಞರು ಹೇಳುತ್ತಾರೆ. ಅವರು ಹೀಗೆ ಹೇಳಲು ಇರುವ ಕಾರಣಗಳನ್ನು ನೋಡೋಣ.
    • ಮೊಟ್ಟೆಗಳನ್ನು ಶೀಥಲೀಕರಿಸುವ ಅಗತ್ಯವಿಲ್ಲ. ಅವುಗಳನ್ನು ಹೊರಗಿನ ವಾತವರಣದಲ್ಲಿಟ್ಟರೂ ಕೆಡದೆ ಇರುತ್ತವೆ.
    • ರೂಂ ಟೆಂಪರೇಚರ್ ನಲ್ಲಿ ಇಟ್ಟಿರುವ ಮೊಟ್ಟೆಗಳನ್ನೇ ತಿನ್ನುವುದು ಒಳ್ಳೆಯದು.
      ಹೊರಗಿನ ವಾತಾವರಣದಲ್ಲಿ ಇಡಲಾದ ಮೊಟ್ಟೆಗಳಿಗೆ ಹೋಲಿಸಿದಲ್ಲಿ, ಫ್ರಿಡ್ಜ್ ನಲ್ಲಿಡಲಾದ ಮೊಟ್ಟೆಗಳು ಬೇಗನೆ ಕೊಳೆಯುತ್ತವೆ.
    • ಪ್ರಿಡ್ಜ್ ನಲ್ಲಿಡಲಾದ ಮೊಟ್ಟೆಗಳನ್ನು ಹೊರಗೆ ತೆಗೆದು ಉಪಯೋಗಿಸಿದಾಗ ರುಚಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸ್ವಲ್ಪ ಹುಳಿಯಾಗಿರುತ್ತವೆ.
    •  ಹೊರಗಿಡಲಾದ ಮೊಟ್ಟೆಗಳಿಗೆ ಹೋಲಿಸಿದಲ್ಲಿ, ಫ್ರಿಡ್ಜ್ ನಲ್ಲಿಡಲಾದ ಮೊಟ್ಟೆಯ ಸಿಪ್ಪೆ ಮೇಲೆ ಬ್ಯಾಕ್ಟೀರಿಯಗಳು ಹೆಚ್ಚಾಗಿರುತ್ತವೆ.

By suddi9

Leave a Reply

Your email address will not be published. Required fields are marked *